ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ನಟ ಪುನೀತ್ ರಾಜ್ ಕುಮಾರ್ ಮೂರನೇ ಪುಣ್ಯಸ್ಮರಣೆ: ಪುನೀತ್ ಸಮಾಧಿಗೆ ರಾಜ್ ಕುಟುಂಬದಿಂದ ಪೂಜೆ ಸಲ್ಲಿಕೆ: ಪರಮಾತ್ಮನನ್ನು ನೆನೆದ ಅಭಿಮಾನಿಗಳು

ನಟ ಪುನೀತ್ ರಾಜ್ ಕುಮಾರ್ ಮೂರನೇ ಪುಣ್ಯಸ್ಮರಣೆ: ಪುನೀತ್ ಸಮಾಧಿಗೆ ರಾಜ್ ಕುಟುಂಬದಿಂದ ಪೂಜೆ ಸಲ್ಲಿಕೆ: ಪರಮಾತ್ಮನನ್ನು ನೆನೆದ ಅಭಿಮಾನಿಗಳು

ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ ಮೂರು ವರ್ಷ. ಈ ಹಿನ್ನಲೆ ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ರಾಜ್ ಕುಟುಂಬ ಪೂಜೆ ಸಲ್ಲಿಸಿದೆ.

ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಎರಡನೇ ಮಗಳು ವಂದಿತಾ, ಸಹೋದರ ರಾಘವೇಂದ್ರ ರಾಜ್‌ಕುಮಾರ್, ಅವರ ಪತ್ನಿ ಮಂಗಳ, ಮಕ್ಕಳಾದ ವಿನಯ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್ ಹಾಗೂ ಪುನೀತ್ ಅವರ ದೊಡ್ಡ ಅಕ್ಕ ಲಕ್ಷ್ಮೀ ಗೋವಿಂದರಾಜ್ ಕುಟುಂಬಸ್ಥರು ಸೇರಿ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

2021ರ ಅಕ್ಟೋಬರ್ 29ರಂದು ಅಪ್ಪು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಅವರ ಅಗಲಿಕೆ ಲಕ್ಷಾಂತರ ಜನರಿಗೆ ದೊಡ್ಡ ಘಾಸಿಯುಂಟು ಮಾಡಿತ್ತು. ಅವರ ಸಾವಿನ ಬಳಿಕ ರಾಜ್ಯಾದ್ಯಂತ ಹಲವು ಪುತ್ಥಳಿ, ದೇಗುಲಗಳು ನಿರ್ಮಾಣಗೊಂಡಿವೆ. ಜಿಲ್ಲೆಗಳ ರಸ್ತೆಗೆ ಅವರ ಹೆಸರನ್ನು ಇಡುವ ಮೂಲಕ ಅವರನ್ನು ಸ್ಮರಿಸಲಾಗುತ್ತಿದೆ. ಇಂದು ಕೂಡ ಅವರ ಸಮಾಧಿ ಬಳಿ ನೂರಾರು ಅಭಿಮಾನಿಗಳು ಬಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!