ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಗೋವಿಂದೂರು: ರಸ್ತೆ ಬದಿ ಕುಸಿತ: ಮತ್ತಷ್ಟು ಬಿರುಕು..!: ಹೊಂಡಮಯ ರಸ್ತೆ: ಸಂಚಾರ ಅಪಾಯ..!: ಬೆಳ್ತಂಗಡಿಯಿಂದ ಉಪ್ಪಿನಂಗಡಿಗೆ ಸಂಚರಿಸುವ ವಾಹನ ಸವಾರರೇ ಎಚ್ಚರ..!

ಗೋವಿಂದೂರು: ರಸ್ತೆ ಬದಿ ಕುಸಿತ: ಮತ್ತಷ್ಟು ಬಿರುಕು..!: ಹೊಂಡಮಯ ರಸ್ತೆ: ಸಂಚಾರ ಅಪಾಯ..!: ಬೆಳ್ತಂಗಡಿಯಿಂದ ಉಪ್ಪಿನಂಗಡಿಗೆ ಸಂಚರಿಸುವ ವಾಹನ ಸವಾರರೇ ಎಚ್ಚರ..!

ಗೋವಿಂದೂರು: ತಿರುವಿನಲ್ಲೇ ರಸ್ತೆ ಬದಿ ಕುಸಿದು ರಸ್ತೆ ಮತ್ತಷ್ಟು ಬಿರುಕು ಬಿಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ಗೋವಿಂದೂರು- ಮಾವಿನಕಟ್ಟೆ ಸಮೀಪದ ಯಂತ್ರಡ್ಕ ಬಳಿ ಸಂಭವಿಸಿದೆ.

ಬೆಳ್ತಂಗಡಿ- ಉಪ್ಪಿನಂಗಡಿ ಮುಖ್ಯ ರಸ್ತೆ ಇದಾಗಿದ್ದು, ಪ್ರತೀ ನಿತ್ಯ ಖಾಸಗಿ, ಸರಕಾರಿ ಬಸ್, ಶಾಲಾ ಬಸ್ ಗಳು, ಇತರೇ ವಾಹನಗಳು ಇದೇ ಓಡುತ್ತಿದೆ. ಆದರೆ ಯಂತ್ರಡ್ಕ ಸಮೀಪ ತಿರುವಿನಲ್ಲೆ ರಸ್ತೆ ಬದಿ ಕುಸಿದು ಅಪಾಯ ಸೃಷ್ಟಿಯಾಗಿದೆ.

ಬೆಳ್ತಂಗಡಿಯಿಂದ ಉಪ್ಪಿನಂಗಡಿ ಕಡೆಗೆ ಬರುವ ವಾಹನ ಸವಾರರು ಜಾಗರೂಕತೆಯಿಂದ ಇಲ್ಲಿ ವಾಹನ ಚಲಾಯಿಸಬೇಕಿದೆ. ಏಕಕಾಲದಲ್ಲಿ 2 ಕಡೆಯಿಂದ ವಾಹನಗಳು ಬಂದರೆ ಇಲ್ಲಿ ಚಾಲಕರಿಗೆ ಸಂಕಷ್ಟ ಎದುರಾಗಬಹುದು. ರಸ್ತೆಯ ಕಾಲು ಭಾಗ ಕುಸಿದಿದ್ದು ಯಾವುದೇ ಅಪಾಯದ ಸೂಚನೆ ಇಲ್ಲದೆ ಇರುವುದು ಮತ್ತಷ್ಟು ಆತಂಕಕಾರಿಯಾಗಿದೆ.

ಪ್ರತೀ ದಿನ ಸಂಜೆ ಮಳೆಯೂ ಹೆಚ್ಚಾಗಿರುವುದರಿಂದ ಈ ರಸ್ತೆ ಮತ್ತಷ್ಟು ಕುಸಿಯುವ ಲಕ್ಷಣ ಗೋಚರವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಶೀಘ್ರದಲ್ಲಿ ಗಮನವಹಿಸಬೇಕಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!