Home › ಯುವತಿ ಮುಂದೆ ಅನುಚಿತ ವರ್ತನೆ: ಮೂವರು ಪುರುಷರಿಗೆ ರಸ್ತೆಯಲ್ಲೇ ಥಳಿಸಿದ ಯುವತಿ..!
ಯುವತಿ ಮುಂದೆ ಅನುಚಿತ ವರ್ತನೆ: ಮೂವರು ಪುರುಷರಿಗೆ ರಸ್ತೆಯಲ್ಲೇ ಥಳಿಸಿದ ಯುವತಿ..!
ONLINE PUDU / Thursday, October 10, 2024
ಉತ್ತರ ಪ್ರದೇಶ: ಮಾರುಕಟ್ಟೆಗೆ ಹೋಗುತ್ತಿದ್ದ ವೇಳೆ ಯುವತಿ ಮುಂದೆ ಮೂವರು ಪುರುಷರು ಅನುಚಿತವಾಗಿ ವರ್ತಿಸಿದ್ದು ಇದರಿಂದ ಕೋಪಗೊಂಡ ಯುವತಿ ಮೂವರನ್ನು ಹಿಡಿದು ರಸ್ತೆಯಲ್ಲಿ ಥಳಿಸಿರುವ ಘಟನೆ ಮೊರಾದಾಬಾದ್‌ನ ಕಾಂತ್ ನಗರದಲ್ಲಿ ನಡೆದಿದೆ.
ಕೆಲವು ವಸ್ತುಗಳನ್ನು ಖರೀದಿಸಲು ತನ್ನ ಸೋದರ ಸಂಬಂಧಿಯೊಂದಿಗೆ ಯುವತಿ ಮಾರುಕಟ್ಟೆಗೆ ಹೋಗುತ್ತಿದ್ದ ವೇಳೆ ಮೂವರು ಪುರುಷರು ಅನುಚಿತ ವರ್ತಿಸಿದ್ದು, ಇವರ ವರ್ತನೆಯಿಂದ ಕುಪಿತಳಾದ ಮಹಿಳೆ ಕೂಡಲೇ ಬೈಕ್‌ನಿಂದ ಇಳಿದು ಕಿರುಕುಳ ನೀಡಿದ ಮೂವರನ್ನು ಹಿಡಿದು ರಸ್ತೆಯಲ್ಲಿ ಥಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೂವರನ್ನು ವಶಕ್ಕೆ ಪಡೆದು ಎಫ್‌ಐಆರ್ ದಾಖಲಿಸಿ ಬಂಧಿಸಿದ್ದಾರೆ.