ನೆಕ್ಕಿಲಾಡಿ ಬೈಲು ನೈಯಲ್ಗ ನಿವಾಸಿ ಜನಾರ್ದನ ಬಂಗೇರ ಎಂಬವರ ಮನೆಯ ಸಮೀಪವೇ ಬೆಳಗ್ಗೆ ಹುಲಿ ಕಂಡುಬAದಿದೆ ಎನ್ನಲಾಗಿದ್ದು, ತಕ್ಷಣವೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಉಪ ವಲಯ ಅರಣ್ಯಾಧಿಕಾರಿ ಜಯಕುಮಾರ್, ಗಸ್ತು ಅರಣ್ಯ ಪಾಲಕ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸ್ಥಳದಲ್ಲಿ ಪತ್ತೆಯಾದ ಕಾಡುಪ್ರಾಣಿಯ ಹೆಜ್ಜೆ ಗುರುತು ಚಿರತೆಯದ್ದೋ ಅಥವಾ ಹುಲಿಯದ್ದೋ ಅನ್ನುವುದು ಪರಿಶೀಲನೆಯ ಬಳಿಕ ತಿಳಿದು ಬರಬೇಕಿದೆ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.