ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ತಾಯಿಯನ್ನು ಕೊಂದು ಆಕೆಯ ಅಂಗಾಂಗಗಳನ್ನು ಬೇಯಿಸಿದ್ದ ಪಾಪಿ ಮಗ: ಅಪರಾಧಿಗೆ ಮರಣದಂಡನೆ ಶಿಕ್ಷೆ: ತೀರ್ಪು ಎತ್ತಿಹಿಡಿದ ಬಾಂಬೆ ಹೈಕೋರ್ಟ್..!

ತಾಯಿಯನ್ನು ಕೊಂದು ಆಕೆಯ ಅಂಗಾಂಗಗಳನ್ನು ಬೇಯಿಸಿದ್ದ ಪಾಪಿ ಮಗ: ಅಪರಾಧಿಗೆ ಮರಣದಂಡನೆ ಶಿಕ್ಷೆ: ತೀರ್ಪು ಎತ್ತಿಹಿಡಿದ ಬಾಂಬೆ ಹೈಕೋರ್ಟ್..!

ಸಾಂದರ್ಭಿಕ ಚಿತ್ರ

ತಾಯಿಯನ್ನು ಕೊಂದು ಆಕೆಯ ಅಂಗಾಂಗಗಳನ್ನು ಬೇಯಿಸಿದ್ದ ಪಾಪಿ ಮಗನಿಗೆ ಬಾಂಬೆ ಹೈಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2017ರಲ್ಲಿ ಕೊಲ್ಹಾಪುರದ ಸುನೀಲ್ ಕುಚ್ಕೋರ್ವಿ ತನ್ನ ತಾಯಿ ಯಲ್ಲಮ್ಮ ರಾಮಾ ಕುಚ್ಕೊರವಿಯನ್ನು ಹತ್ಯೆ ಮಾಡಿದ್ದ. ಅಷ್ಟೇ ಅಲ್ಲದೆ ಆಕೆಯ ದೇಹದ ಭಾಗಗಳನ್ನು ಬೇಯಿಸಿದ್ದ. ಹೃದಯವನ್ನೂ ತೆಗೆದು ಅದನ್ನು ಕೂಡ ಬೇಯಿಸಿದ್ದ ಎಂದಿದ್ದಾರೆ.

ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ-ದೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರ ಪೀಠವು ಆತನನ್ನು ನರಭಕ್ಷನಿಗೆ ಹೋಲಿಸಿದೆ. ಜೊತೆಗೆ ಈ ಕೃತ್ಯ ಎಸಗಿದ್ದ ಮಗನಿಗೆ ಸುಧಾರಣೆಗೆ ಅವಕಾಶವೇ ಇಲ್ಲ, ಆತನಿಗೆ ಮರಣದಂಡನೆ ಶಿಕ್ಷೆಯೇ ಸರಿ ಎಂದು ಹೇಳಿ ಹೈಕೋರ್ಟ್ ಮರಣದಂಡನೆ ತೀರ್ಪು ಎತ್ತಿಹಿಡಿದಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!