ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ‘ಲೀಡರ್ ರಾಮಯ್ಯ’ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್..! : ಸಿದ್ದರಾಮಯ್ಯ ಜೀವನಾಧಾರಿತ ಚಿತ್ರಕ್ಕೆ ಮೂಡಾ ಸಂಕಷ್ಟ..?: ಶೂಟಿಂಗ್ ಸ್ಥಗಿತ: ನಿರ್ಮಾಪಕ ನೀಡಿದ ಕಾರಣ ಏನು?

‘ಲೀಡರ್ ರಾಮಯ್ಯ’ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್..! : ಸಿದ್ದರಾಮಯ್ಯ ಜೀವನಾಧಾರಿತ ಚಿತ್ರಕ್ಕೆ ಮೂಡಾ ಸಂಕಷ್ಟ..?: ಶೂಟಿಂಗ್ ಸ್ಥಗಿತ: ನಿರ್ಮಾಪಕ ನೀಡಿದ ಕಾರಣ ಏನು?

ಸಿಎಂ ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾ ‘ಲೀಡರ್ ರಾಮಯ್ಯ’ ಚಿತ್ರೀಕರಣ ಭರದಿಂದ ಸಾಗುತ್ತಿತ್ತು. ಆದರೆ ಸದ್ಯ ಸಿನಿಮಾ ಶೂಟಿಂಗ್ ಗೆ ಬ್ರೇಕ್ ಹಾಕಲಾಗಿದೆ. ಮುಡಾ ಬೆಳವಣಿಗೆ ಸಿನಿಮಾದ ಮೇಲೆ ಪ್ರಭಾವ ಬೀರಿದ ಹಿನ್ನಲೆ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ ಎಂಬ ಗಾಳಿ ಸುದ್ದಿ ಹಬ್ಬುತ್ತಿದ್ದು ಆದರೆ ನಿರ್ಮಾಪಕ ಬೇರೆ ರೀತಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಈಗಾಗಲೆ ಮೈಸೂರು ಭಾಗದಲ್ಲಿ ಸಿಎಂ ಬಾಲ್ಯದ ಜೀವನದ ಚಿತ್ರೀಕರಣ ಪೂರ್ಣಗೊಂಡಿದೆ. ಆದರೆ 2ನೇ ಭಾಗದ ಸನ್ನಿವೇಶಗಳ ಚಿತ್ರೀಕರಣಕ್ಕೆ ಸದ್ಯ ಬ್ರೇಕ್ ಹಾಕಲಾಗಿದೆ. ಕಾರಣ ಮುಡಾ ಬೆಳವಣಿಗೆಯನ್ನು ಸಿನಿಮಾದಲ್ಲಿ ಸೇರಿಸಲು ಚಿಂತನೆ ನಡೆದಿದೆ. ಇದರ ಜೊತೆಗೆ ಚಿತ್ರದ ನಾಯಕನ ಡೇಟ್ ಸಮಸ್ಯೆ ಹಿನ್ನೆಲೆಯಲ್ಲಿ ಶೂಟಿಂಗ್ ನಿಲ್ಲಿಸಲಾಗಿದೆ.

ಕಾಲಿವುಡ್‌ನ ಖ್ಯಾತ ಹೀರೋ ವಿಜತ್ ಸೇತುಪತಿ ಈ ಸಿನಿಮಾದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಅವರು ಹಲವು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದರಿAದ ಈ ವಿಜಯ್ ಸೇತುಪತಿ ಅವರ ಡೇಟ್ ಸಮಸ್ಯೆಯಾಗಿದೆ. ಈ ಹಿನ್ನೆಲೆ ಲೀಡರ್ ರಾಮಯ್ಯ ಚಿತ್ರದ ಶೂಟಿಂಗ್ ಸ್ಥಗಿತ ಮಾಡಿದ್ದೇವೆ ಎಂದು ಕೊಪ್ಪಳದಲ್ಲಿ ಚಿತ್ರದ ನಿರ್ಮಾಪಕ ಹಯ್ಯಾತ್ ಪೀರ್ ಸ್ಪಷ್ಟನೆ ನೀಡಿದ್ದಾರೆ.

ಈಗಾಗಲೆ ಸಿಎಂ ವಿರುದ್ಧ ತನಿಖೆಗೆ ಆದೇಶ ನೀಡಲಾಗಿದೆ. ಈ ಕಾರಣಕ್ಕೆ ಚಿತ್ರ ತಂಡ ಶೂಟಿಂಗ್ ನಿಲ್ಲಿಸಿ ರಾಜಕೀಯ ಬೆಳವಣಿಗೆ ಕಡೆಗೆ ಗಮನ ಹರಿಸುತ್ತಿದೆ. ಈ ಸಿನಿಮಾಗಾಗಿ ಸಿದ್ದರಾಮಯ್ಯ ಅಭಿಮಾನಿಗಳು ಕಾದುಕುಳಿತ್ತಿದ್ದಾರೆ. ಸಿನಿಮಾ ಅರ್ಧಕ್ಕೆ ನಿಂತಿರೋದು ಬೇಸರದ ಸಂಗತಿಯಾದರೂ ಮತ್ತೆ ಯಾವಾಗ ಶೂಟಿಂಗ್ ಶುರುವಾಗುತ್ತದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!