ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪ್ರಿಯಕರನ ಜೊತೆ ಎರಡು ಮಕ್ಕಳ ತಾಯಿ ಎಸ್ಕೇಪ್:ಪ್ರೀತಿಗೆ ಅಡ್ಡಿ ಎಂದು ಹೆತ್ತ ಕಂದಮ್ಮಗಳನ್ನೇ ಸಾಯಿಸಿದ ಪಾಪಿ ತಾಯಿ: ಇಬ್ಬರು ಆರೋಪಿಗಳು ಪೊಲೀಸ್ ವಶ

ಪ್ರಿಯಕರನ ಜೊತೆ ಎರಡು ಮಕ್ಕಳ ತಾಯಿ ಎಸ್ಕೇಪ್:ಪ್ರೀತಿಗೆ ಅಡ್ಡಿ ಎಂದು ಹೆತ್ತ ಕಂದಮ್ಮಗಳನ್ನೇ ಸಾಯಿಸಿದ ಪಾಪಿ ತಾಯಿ: ಇಬ್ಬರು ಆರೋಪಿಗಳು ಪೊಲೀಸ್ ವಶ

ಬೆಂಗಳೂರು: ಪ್ರೀತಿಗೆ ಅಡ್ಡಿ ಎಂದು ತಾಯಿಯೊಬ್ಬಳು ಹೆತ್ತ ಕಂದಮ್ಮಗಳನ್ನೇ ಹತ್ಯೆ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ಸ್ವೀಟಿ, (24) ಎಂಬಾಕೆಗೆ ಗ್ರೆಗೋರಿ ಫ್ರಾನ್ಸಿಸ್(27) ಎಂಬಾತನ ಮೇಲೆ ಪ್ರೇಮಾಂಕುರವಾಗಿತ್ತು. ಆದರೆ ಆಕೆಗೆ ಈಗಾಗಲೆ ಮದುವೆಯಾಗಿ 2 ವರ್ಷದ ಕಬೀಲಾ ಎಂಬ ಹಾಗೂ 11 ತಿಂಗಳ ಕಬೀಲನ್ ಎಂಬ ಇಬ್ಬರು ಮಕ್ಕಳಿದ್ದು, ಈ ಮಕ್ಕಳು ತನ್ನ ಪ್ರೀತಿಗೆ ಅಡ್ಡಿಯಾಗುತ್ತದೆ ಎಂದು 15 ದಿನಗಳ ಅಂತರದಲ್ಲಿ ಪ್ರಿಯಕರನ ಜೊತೆ ಸೇರಿ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದಾಳೆ.

ರಾಮನಗರದ ಮನೆಯಲ್ಲಿದ್ದ ಇಬ್ಬರೂ ಮಕ್ಕಳನ್ನು ತಲೆದಿಂಬಿನಿಂದ ಉಸಿರು ಗಟ್ಟಿಸಿ ಕೊಂದು, ಬಳಿಕ ಮಕ್ಕಳಿಗೆ ಹುಷಾರಿಲ್ಲದೇ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ನೆರೆ ಹೊರೆಯವರನ್ನು ನಂಬಿಸಿ ರಾಮನಗರದ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.

15 ದಿನಗಳ ಅಂತರದಲ್ಲಿ ಎರಡು ಮಕ್ಕಳ ಅಂತ್ಯಕ್ರಿಯೆ ನಡೆದ ಹಿನ್ನೆಲೆಯಲ್ಲಿ ಸ್ಮಶಾನದ ಕಾವಲುಗಾರನಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಮಕ್ಕಳನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!