ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಭಯೋತ್ಪಾದಕರಿಂದ ಇಬ್ಬರು ಭಾರತೀಯ ಸೇನೆಯ ಯೋಧರ ಅಪಹರಣ: ಪಾತಾಕಿಗಳಿಂದ ತಪ್ಪಿಸಿಕೊಂಡ ಓರ್ವ ಸಿಪಾಯಿ: ಮತ್ತೋರ್ವ ಯೋಧನ ಶೋಧಕ್ಕೆ ಮುಂದಾದ ಸೈನ್ಯ

ಭಯೋತ್ಪಾದಕರಿಂದ ಇಬ್ಬರು ಭಾರತೀಯ ಸೇನೆಯ ಯೋಧರ ಅಪಹರಣ: ಪಾತಾಕಿಗಳಿಂದ ತಪ್ಪಿಸಿಕೊಂಡ ಓರ್ವ ಸಿಪಾಯಿ: ಮತ್ತೋರ್ವ ಯೋಧನ ಶೋಧಕ್ಕೆ ಮುಂದಾದ ಸೈನ್ಯ

ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತೀಯ ಸೇನೆಯ ಯೋಧರೊಬ್ಬರನ್ನು ಭಯೋತ್ಪಾದಕರು ಅಪಹರಣ ಮಾಡಿರುವ ಕುರಿತು ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು ಭಾರತೀಯ ಸೈನ್ಯ ಶೋಧಕ್ಕೆ ಮುಂದಾಗಿದೆ.

ಮೂಲಗಳ ಪ್ರಕಾರ, ಅನಂತನಾಗ್‌ನ ಅರಣ್ಯ ಪ್ರದೇಶದಿಂದ ಇಬ್ಬರು ಟಿಎ ಸೈನಿಕರನ್ನು ಅಪಹರಿಸಲಾಗಿತ್ತು. ಈ ಅಪಹರಣ ಸಂದರ್ಭದಲ್ಲಿ ಓರ್ವ ಯೋಧ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ತಪ್ಪಿಸಿಕೊಳ್ಳುವಾಗ ಯೋಧನ ಭುಜ ಮತ್ತು ಎಡ ಕಾಲಿಗೆ ಗಾಯಗಳಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಶ್ರೀನಗರದ 92 ಮೂಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಹರಣಕ್ಕೆ ಒಳಗಾಗಿರುವ ಮತ್ತೊಬ್ಬ ಯೋಧನಿಗಾಗಿ ಭದ್ರತಾ ಪಡೆಗಳು ಹುಟುಕಾಟ ಪ್ರಾರಂಭಿಸಿವೆ ಅಪಹರಣಕ್ಕೊಳಗಾದ ಟಿಎ ಯೋಧನನ್ನು ಅನಂತನಾಗ್ ಜಿಲ್ಲೆಯ ಮುಕ್ದಂಪೋರಾ ನೌಗಾಮ್ ನಿವಾಸಿ ಹಿಲಾಲ್ ಅಹ್ಮದ್ ಭಟ್ 162 ಯುನಿಟ್ ಟಿಎ ಎಂದು ಗುರುತಿಸಲಾಗಿದೆ.

ಸುರಕ್ಷಿತವಾಗಿ ವಾಪಸ್ ಬಂದ ಯೋಧನನ್ನು ಫಯಾಜ್ ಅಹ್ಮದ್ ಶೇಖ್ ಎಂದು ಗುರುತಿಸಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!