ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಂಗಳೂರು: ಆಯತಪ್ಪಿ ಕೆರೆಗೆ ಬಿದ್ದ ಅಣ್ಣತಂಗಿ: ನೀರಿನಲ್ಲಿ ಮುಳುಗಿ ನಾಪತ್ತೆ..!

ಬೆಂಗಳೂರು: ಆಯತಪ್ಪಿ ಕೆರೆಗೆ ಬಿದ್ದ ಅಣ್ಣತಂಗಿ: ನೀರಿನಲ್ಲಿ ಮುಳುಗಿ ನಾಪತ್ತೆ..!

ಬೆಂಗಳೂರು: ಆಟವಾಡುತ್ತಿದ್ದಾಗ ಅಣ್ಣ- ತಂಗಿ ಆಯತಪ್ಪಿ ಕೆರೆಗೆ ಬಿದ್ದು ನೀರನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸೋಮವಾರ ಸಂಜೆ ಸುಮಾರು 5.30ಕ್ಕೆ ಕೆಂಗೇರಿ ಬಸ್ ನಿಲ್ದಾಣದ ಎದುರಿನ ಕೆರೆಯಲ್ಲಿ ಈ ಘಟನೆ ನಡೆದಿದ್ದು ಹರ್ಷ ಲೇಔಟ್‌ನ ಶ್ರೀನಿವಾಸ್ (13) ಮತ್ತು ಮಹಾಲಕ್ಷ್ಮೀ(11) ಕೆರೆಗೆ ಬಿದ್ದು ನಾಪತ್ತೆಯಾಗಿದ್ದಾರೆ.

ಕೆರೆಯ ವಾಕಿಂಗ್ ಪಾತ್‌ನಲ್ಲಿ ಅಣ್ಣ- ತಂಗಿ ಆಟವಾಡುತ್ತಿದ್ದರು. ಈ ವೇಳೆ ಬಿಂದಿಗೆಯೊಂದು ಕೆರೆಗೆ ಉರುಳಿದ ಪರಿಣಾಮ ಮಹಾಲಕ್ಷ್ಮೀ ಬಿಂದಿಗೆ ಎತ್ತಿಕೊಳ್ಳಲು ಕೆರೆಗೆ ಇಳಿದಿದ್ದಾಳೆ. ಈ ವೇಳೆ ಆಕೆ ನೀರಿನಲ್ಲಿ ಮುಳಗಿದ್ದು, ತಂಗಿ ನೀರಿನಲ್ಲಿ ಮುಳುಗುವುದನ್ನು ನೋಡಿದ ಅಣ್ಣ ಸಹ ತಂಗಿಯನ್ನು ಮೇಲಕ್ಕೆ ಎಳೆಯಲು ಕೆರೆಗೆ ಇಳಿದಿದ್ದಾನೆ. ಆಗ ಆತನೂ ನೀರಿನಲ್ಲಿ ಮುಳುಗಿದ್ದಾನೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಕ್ಕಳಿಗಾಗಿ ಅಗ್ನಿಶಾಮಕ ಸಿಬ್ಬಂದಿಗಳು ಕೆರೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ, ಮಕ್ಕಳು ಪತ್ತೆಯಾಗಿಲ್ಲ. ಸದ್ಯ ಪತ್ತೆ ಕಾರ್ಯ ಮುಂದುವರಿದಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!