ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ‘ಶಾಂತಿಶ್ರೀ' ಜೈನ ಮಹಿಳಾ ಸಮಾಜ, ಬೆಳ್ತಂಗಡಿ, ದ.ಕ: ‘ಆಹಾರೋತ್ಸವ' ಕಾರ್ಯಕ್ರಮ

‘ಶಾಂತಿಶ್ರೀ' ಜೈನ ಮಹಿಳಾ ಸಮಾಜ, ಬೆಳ್ತಂಗಡಿ, ದ.ಕ: ‘ಆಹಾರೋತ್ಸವ' ಕಾರ್ಯಕ್ರಮ

ಬೆಳ್ತಂಗಡಿ: ‘ಶಾಂತಿಶ್ರೀ' ಜೈನ ಮಹಿಳಾ ಸಮಾಜ, ಬೆಳ್ತಂಗಡಿ, ದ.ಕ ಜಿಲ್ಲೆ ವತಿಯಿಂದ ಅ.20ರಂದು ಶ್ರೀ ಧರ್ಮಸ್ಥಳ ಮಂಜುನಾಥ ಕಲಾಭವನದ ಪಿನಾಕಿಹಾಲ್ ನಲ್ಲಿ ಕಂದ ಮೂಲರಹಿತ ಆಹಾರೋತ್ಸವ ನಡೆಸಲಾಯಿತು.

ಕಾರ್ಯಕ್ರಮವನ್ನು ಪ್ರಸನ್ನ ಆರ್. ಹೆಗ್ಡೆಯವರು ದೀಪ ಬೆಳಗುವ ಮೂಲಕ ಉದ್ಘಾಟಿಸಿ, ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾದ ಭಾ. ಜೈನ್ ಮಿಲನ್ ಬೆಳ್ತಂಗಡಿ, ಇದರ ಅಧ್ಯಕ್ಷರಾದ ವೀರ್ ನವೀನ್ ಕುಮಾರ್ ಜೈನ್ ರವರು ಮಾತನಾಡಿ, ಮನೆಗಳಲ್ಲಿ ಶುದ್ಧವಾದ ಪೌಷ್ಟಿಕಾಂಶ ಭರಿತ, ಸಾಂಪ್ರದಾಯಿಕ ಆಹಾರಗಳನ್ನು ತಯಾರಿಸುವಲ್ಲಿ ಅಮ್ಮಂದಿರ ಪಾತ್ರ ಹಿರಿದಾದುದು. ಜೈನ ಆಹಾರ ಪದ್ಧತಿಗಳು ವೈಜ್ಞಾನಿಕವಾಗಿಯೂ ದೃಢೀಕರಿಸಲ್ಪಟ್ಟಿದೆ ಎಂಬುದಾಗಿ ತಿಳಿಸಿದರು. ನವೆಂಬರ್ ತಿಂಗಳಲ್ಲಿ ನಡೆಯಲಿರುವ ವಲಯ ಮಟ್ಟದ ಜಿನಭಜನೆ ಕಾರ್ಯಕ್ರಮದ ಮಾಹಿತಿಯನ್ನು ಈ ಸಂದರ್ಭದಲ್ಲಿ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ | ತ್ರಿಶಲಾ ಜೈನ್.ಕೆ. ಎಸ್ ರವರು, ಕಂದ ಮೂಲರಹಿತ ಆಹಾರ ಮಹತ್ವದ ಬಗ್ಗೆ ತಿಳಿಸುತ್ತಾ, ಆಹಾರದ ವಿಧಗಳಾದ ರಾಜಸ ಆಹಾರ, ತಾಮಸ ಆಹಾರ ಮತ್ತು ಸಾತ್ವಿಕ ಆಹಾರದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.

30 ಬಗೆಯ ವಿವಿಧ ಕಂದ ಮೂಲರಹಿತ ಖಾದ್ಯಗಳನ್ನು ತಯಾರಿಸಿ ತಂದಿರುವ ಸದಸ್ಯೆಯರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ವೈಶಾಲಿ ಬಲ್ಲಾಳ್, ಮಂಗಳೂರು ಇವರು ಅತಿಥಿಗಳನ್ನು ಗೌರವಿಸಿದರು.

ಸುಷ್ಮಾ ಮತ್ತು ಬಳಗದವರು ಪ್ರಾರ್ಥಿಸಿ, ಕಾರ್ಯದರ್ಶಿ ರಾಜಶ್ರೀ. ಎಸ್ ಹೆಗ್ಡೆಯವರು ಸ್ವಾಗತಿಸಿದರು. ಸರಿಕಾರವರು ವಂದಿಸಿ, ಧವಳಾರವರು ಕಾರ್ಯಕ್ರಮ ನಿರೂಪಿಸಿದರು. ಅನುಪಮಾ ಡಿ ಜೈನ್ ರವರು ಸಹಕರಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!