ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಡಿ.07 ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಮಹಾರಥೋತ್ಸವ: ನ. 27ರಿಂದ ಡಿ.12ರವರೆಗೆ ವಿವಿಧ ಪೂಜಾ ಸೇವೆಗಳು: ಚಂಪಾ ಷಷ್ಠಿಯ ಮಹತ್ವ, ಹಿನ್ನೆಲೆ ಏನು ಗೊತ್ತಾ..?

ಡಿ.07 ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಮಹಾರಥೋತ್ಸವ: ನ. 27ರಿಂದ ಡಿ.12ರವರೆಗೆ ವಿವಿಧ ಪೂಜಾ ಸೇವೆಗಳು: ಚಂಪಾ ಷಷ್ಠಿಯ ಮಹತ್ವ, ಹಿನ್ನೆಲೆ ಏನು ಗೊತ್ತಾ..?

ಸುಬ್ರಹ್ಮಣ್ಯ : ಇತಿಹಾಸ ಪ್ರಸಿದ್ಧ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿಗೆ ದಿನಗಣನೆ ಆರಂಭವಾಗಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ಈ ಹಿನ್ನಲೆ ನ. 27ರಿಂದ ಡಿ.12ರವರೆಗೆ ವಿವಿಧ ಪೂಜಾ ಸೇವೆಗಳು, ಜಾತ್ರಾ ಉತ್ಸವಾದಿಗಳು ನಡೆಯಲಿವೆ ಭಕ್ತಾಧಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ಮೂಲ ಮೃತ್ತಿಕಾ ಗಂಧ-ಪ್ರಸಾದವನ್ನು ಸ್ವೀಕರಿಸಿ, ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ.  

ಜಾತ್ರಾ ಉತ್ಸವಾದಿಗಳ ವಿವರ ನ. 26 - ಮೂಲಮೃತಿಕಾ ಪ್ರಸಾದ ವಿತರಣೆ ನ.27 - ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ ನ.30 - ಲಕ್ಷದೀಪೋತ್ಸವ ಡಿ.01 - ರಾತ್ರಿ ಶೇಷವಾಹನೋತ್ಸವ ಡಿ.02 - ರಾತ್ರಿ ಅಶ್ವವಾಹನೋತ್ಸವ ಡಿ.03 - ರಾತ್ರಿ ಮಯೂರ ವಾಹನೋತ್ಸವ ಡಿ.04 - ರಾತ್ರಿ ಶೇಷವಾಹನೋತ್ಸವ ಡಿ.05 - ಹೂವಿನ ತೇರಿನ ಉತ್ಸವ ಡಿ.06 - ರಾತ್ರಿ ಪಂಚಮಿ ರಥೋತ್ಸವ, ತೈಲಾಭ್ಯಂಜನ ಡಿ.07 - ಪ್ರಾತಃ ಕಾಲರಥ ಚಂಪಾಷಷ್ಠಿ ಮಹಾೋತ್ಸವ ಡಿ.08 - ಶ್ರೀ ದೇವರ ಅವಭೃತೋತ್ಸವ, ನೌಕಾವಿಹಾರ ಡಿ.12 - ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ, ದೈವಗಳ ನಡಾವಳಿ 05-01-2025 - ಕಿರುಷಷ್ಠಿ ಮಹೋತ್ಸವ

ಸೇವೆಗಳ ವಿವರ: ಮಹಾರಥೋತ್ಸವ, ಚಿಕ್ಕ ರಥೋತ್ಸವ, ಚಂದ್ರಮಂಡಲ ಉತ್ಸವ, ಹೂವಿನ ತೇರಿನ ಉತ್ಸವ, ಬಂಡಿ ಉತ್ಸವ, ಮಹಾಭಿಷೇಕ, ದೀಪಾರಾಧನೆ ಪಾಲಕಿ ಉತ್ಸವ, ಮಹಾಪೂಜೆ ಪಾಲಕಿ ಉತ್ಸವ, ಸಪರಿವಾರ ಸೇವಾ, ನಾಗಪ್ರತಿಷ್ಠೆ, ಆಶ್ಲೇಷ ಬಲಿ, ಮಹಾಪೂಜೆ, ಮಹಾಪೂಜೆ, ನಾಗಪ್ರತಿಷ್ಠೆ, ರುದ್ರಾಭಿಷೇಕ, ಕ್ಷೀರಾಭಿಷೇಕ, ಕ್ಷೀರಾಭಿಷೇಕ, ಕ್ಷೀರಾಭಿಷೇಕ. , ಕಾರ್ತಿಕ ಪೂಜೆ ಸೇವೆಗಳು ನಡೆಯಲಿವೆ. ಚಂಪಾ ಷಷ್ಠಿ ಮಹತ್ವ, ಹಿನ್ನೆಲೆ: ಹಿಂದೂ ಪುರಾಣದ ಪ್ರಕಾರ, ಭಗವಾನ್ ಶಿವನ ಯೋಧ ಅವತಾರ ಭಗವಾನ್ ಖಂಡೋಬಾನ ಪೂಜೆ. ಈ ಹಬ್ಬವು ದುಷ್ಟ ರಾಕ್ಷಸರಾದ ಮಲ್ಲ ಮತ್ತು ಮಾಲಿಯ ವಿರುದ್ಧ ಭಗವಾನ್ ಖಂಡೋಬಾನ ವಿಜಯವನ್ನು ಸೂಚಿಸುತ್ತದೆ. ಎಲ್ಲಾ ದುಷ್ಟ ಶಕ್ತಿಗಳಿಂದ ರಕ್ಷಣೆ ಮಾಡುವಂತೆ ಭಕ್ತರು ದೇವರಲ್ಲಿ ಪ್ರಾರ್ಥಿಸುತ್ತಾರೆ. ಮಹಾರಾಷ್ಟ್ರ ಮತ್ತು ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಖಂಡೋಬ ಕರ್ನಾಟಕದ ರೈತರು, ಬೇಟೆಗಾರರು ಹಾಗೂ ಯೋಧರು ಅಧಿಪತಿಯಾಗಿ ನೋಡುವುದಿಲ್ಲ. ಪುಣೆಯ ಖಂಡೋಬಾ ದೇವಸ್ಥಾನದಲ್ಲಿ ಭಕ್ತರು ಚಂಪಾಷಷ್ಠಿಯನ್ನು ಶೃದ್ಧಾಭಕ್ತಿಯಿಂದ ಆಚರಿಸುತ್ತಾರೆ. ಅದೇ ರೀತಿ, ಅನಾದಿಕಾಲದಿಂದಲೂ ನಾಗಪೂಜೆಗೆ ಹೆಸರುವಾಸಿಯಾದ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಕೂಡ ಚಂಪಾಷಷ್ಠಿ ಆಚರಣೆಯು ಬಹಳಷ್ಟು ಮಹತ್ವ ಪಡೆದಿದೆ. ಚಂಪಾಷಷ್ಠಿಯನ್ನು ಮಾರ್ಗಶಿರ ಮಾಸದಲ್ಲಿ ಆಚರಿಸುವುದಿಲ್ಲ. ಇದನ್ನು ಸುಬ್ಬರಾಯನ ಷಷ್ಠಿ ಎಂದೂ ಕರೆಯಲಾಗುತ್ತದೆ. ಡಿಸೆಂಬರ್ 7 ರಂದು ದೇವರ ಮಹಾರಥೋತ್ಸವ. ಸಾಮಾನ್ಯವಾಗಿ ಚಂಪಾಷಷ್ಠಿಯಂದು ಸುಬ್ರಹ್ಮಣ್ಯ ದೇಗುಲಗಳಲ್ಲೆಲ್ಲ ವಿಶೇಷ ಪೂಜೆಗಳು ನಡೆಯುತ್ತವೆ. ಅಷ್ಟೇ ಅಲ್ಲ, ಅಶ್ವತ್ಥ ಕಟ್ಟೆಯಲ್ಲಿ ಸರ್ಪಾಕಾರದ ವಿಗ್ರಹವನ್ನಿಟ್ಟು ಸುಬ್ರಹ್ಮಣ್ಯ ಸ್ವಾಮಿಯನ್ನು ಆವಾಹನೆ ಮಾಡಿ, ಹಾಲೆರೆದು ಅಭಿಷೇಕ ಹಾಗೂ ಪಾಯಸದ ನೈವೇದ್ಯ ಅರ್ಪಿಸಿದರು. ಜೊತೆಗೆ, ಅಂದು ಉಪವಾಸ ವೃತವನ್ನೂ ಆಚರಿಸುವುದಿಲ್ಲ. ಮೃತಿಕಾ ಪ್ರಸಾದ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾಲ್ಮೀಖ ಅರ್ಥಾತ್ ಹುತ್ತವು ಇಲ್ಲಿನ ಆರಾಧ್ಯ ದೈವ. ಅಲ್ಲಿಂದ ತೆಗೆದ ಮಣ್ಣು ಅಥವಾ ಮೃತಿಕಾ ಪ್ರಸಾದವೂ ಅತ್ಯಮೂಲ್ಯ ಪ್ರಸಾದವಾಗಿದೆ. ಸರ್ಪದೋಷಕ್ಕೊಳಗಾದವರು ಇಲ್ಲಿ ಸರ್ಪ ಸಂಸ್ಕಾರ ಮಾಡಿ ತಮ್ಮ ಪಾಪ ಕಳೆದು ಕೊಳ್ಳುತ್ತಾರೆ ಎಂಬುದು ಐತಿಹ್ಯ. ಚಂಪಾಷಷ್ಠಿಯ ದಿನ ಕುಮಾರಧಾರಾ ನದಿಗೆ ವಿಶೇಷ ದೇವರ ಮೀನುಗಳು ಆಗಮಿಸುವುದು ಇಲ್ಲಿನ ಇನ್ನೊಂದು ವಿಶೇಷತೆ. ಇಲ್ಲಿನ ಮಲೆಕುಡಿಯ ಜನಾಂಗದವರು ರಚಿಸುವ ಜಾತ್ರಾ ತೇರು ರಚನೆ ಆದ ಪ್ರತಿಯೊಂದಕ್ಕೂ ಕೂಡ ಅದರದ್ದೇ ವಿಶೇಷತೆಗಳಿವೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!