ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕಾನರ್ಪ ಪ್ರೀಮಿಯರ್ ಲೀಗ್ - 2024 ಕ್ರಿಕೇಟ್ ಪಂದ್ಯಾಟ: ಚಂದ್ರಕಾಂತ ಕನಪ್ಪಾಡಿ ಟೀಮ್ ಪ್ರಥಮ

ಕಾನರ್ಪ ಪ್ರೀಮಿಯರ್ ಲೀಗ್ - 2024 ಕ್ರಿಕೇಟ್ ಪಂದ್ಯಾಟ: ಚಂದ್ರಕಾಂತ ಕನಪ್ಪಾಡಿ ಟೀಮ್ ಪ್ರಥಮ

ಕಡಿರುದ್ಯಾವರ: ದೀಪಾವಳಿ ಹಬ್ಬದ ಪ್ರಯುಕ್ತ ಕಾನರ್ಪ ಕೋಡಿಯಾಲ್ ಬೈಲ್ ಶಾಲಾ ಮೈದಾನದಲ್ಲಿ ಕಾನರ್ಪ ಪ್ರೀಮಿಯರ್ ಲೀಗ್ - 2024 ಕ್ರಿಕೇಟ್ ಪಂದ್ಯಾಟ ನಡೆದಿದೆ. ಹಿರಿಯ ಸದಸ್ಯರಾದ ಉಮೇಶ್ ಪ್ರಗತಿ ಪಂದ್ಯಾಟದ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕ್ರೀಡೋತ್ಸವದ ಸಂಚಾಲಕರಾದ ಆದರ್ಶ ಉದ್ದದಪಲಿಕೆ, ಬಾಲಕೃಷ್ಣ ಉದ್ದದಪಲಿಕೆ, ನವೀನ್ ಕಾನರ್ಪ, ರಾಮಚಂದ್ರ ಕಾನರ್ಪ, ಜನಾರ್ಧನ ಕಾನರ್ಪ, ರಾಮಚಂದ್ರ ಹೇಡ್ಯ ಉಪಸ್ಥಿತರಿದ್ದರು.

ಪಂದ್ಯಾಟದಲ್ಲಿ 8 ತಂಡಗಳು ಪಾಲ್ಗೊಂಡಿದ್ದವು. ಚಂದ್ರಕಾಂತ ಕನಪ್ಪಾಡಿ ಪ್ರಥಮ ಸ್ಥಾನ ಪಡೆದಿದ್ದು, ದ್ವಿತೀಯ ಹನೀಫ್, ತೃತೀಯ ವಿನ್ಯಾಸ್ ಹಾಗೂ ಚತುರ್ಥ ಶ್ರೇಯಸ್ ತಂಡ ಪಡೆದುಕೊಂಡಿದೆ.

ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆ ಉಜಿರೆ ದಿಶಾನ್ ಹೋಟೆಲ್ ಮಾಲಕರಾದ ದಿನೇಶ್ ಪೂಜಾರಿ ಕಾನರ್ಪ, ಭಾರತೀಯ ಭೂ ಸೇನೆ ಯೋಧರಾದ ಕಮಲಾಕ್ಷ ಗೌಡ ಕಾನರ್ಪ, ಚೆನ್ನಕೇಶವ ಕಾನರ್ಪ, ಕಮಲಾಕ್ಷ ಕೋಡಿ, ಶೀನಪ್ಪ ಗೌಡ ಕನಪ್ಪಾಡಿ, ಚಂದ್ರಕಾಂತ ಗೌಡ ಬೆಟ್ಟು, ಉಮೇಶ್ ಕೌಡಂಗೆ, ರಾಜೇಶ್ ಕೆ. ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!