ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ವೇಣೂರು, ನದಿಯಲ್ಲಿ ಮುಳುಗಿ ಮೂವರು ನೀರುಪಾಲು:

ವೇಣೂರು, ನದಿಯಲ್ಲಿ ಮುಳುಗಿ ಮೂವರು ನೀರುಪಾಲು:

 

 

 

 

 

ಬೆಳ್ತಂಗಡಿ:    ಹಬ್ಬಕ್ಕೆಂದು ಬಂದಿದ್ದ  ಯುವಕರು ಊಟದ ಬಳಿಕ ನದಿಗೆ ಸ್ನಾನಕ್ಕೆಂದು  ಹೋದ ವೇಳೆ   ನೀರುಪಾಲಾದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ನಡ್ತಿಕಲ್ಲು ಎಂಬಲ್ಲಿ‌  ಬುಧವಾರ ಸಂಜೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮೂಡುಕೋಡಿ ಗ್ರಾಮದ ವಾಲ್ಟರ್ ಎಂಬವರ ಮನೆಗೆ ವೇಣೂರು ಚರ್ಚ್ ನ ವಾರ್ಷಿಕ ಹಬ್ಬಕ್ಕೆಂದು   ಬಂದಿದ್ದ  ಕುಪ್ಪಪೆದವು ನಿವಾಸಿ ಲಾರೆನ್ಸ್(20) , ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಸಮೀಪದ ಬಸವನ ಗುಡಿ ನಿವಾಸಿ  ಸೂರಜ್ ಸಿ.ಎಸ್.(19) , ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಕಾಡಬೆಟ್ಟು ನಿವಾಸಿ ಜೈಸನ್(19) ಎಂಬವರು ನ.27 ರಂದು ಊಟ ಮುಗಿಸಿ ಮೂಡುಕೋಡಿ ಗ್ರಾಮದ ನಡ್ತಿಕಲ್ಲು  ಬರ್ಕಜೆ ಡ್ಯಾಂ ಬಳಿಯ ಗಗ್ಗರ ಎರುಗುಂಡಿ ಬಳಿ  ಸ್ನಾನ ಮಾಡಲು ಇಳಿದಿದ್ದು ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಯುವಕರು ನೀರುಪಾಲಾಗಿದ್ದಾರೆ. ಮೂವರ ಮೃತದೇಹ ನೀರಿನಿಂದ ಹೊರತೆಗೆಯಲಾಗಿದ್ದು. ಈ ಬಗ್ಗೆ ವೇಣೂರು ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ.ಯುವಕರನ್ನು ಮಂಗಳೂರಿನ ನರ್ಸಿಂಗ್ ಕಲಿಯುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!