ನವೆಂಬರ್ 18ರಂದು ಶಿವಗಂಗೆ ಬೆಟ್ಟದ ತಪ್ಪಲಲ್ಲಿರುವ ಕಂಬಾಳು ಗೊಲ್ಲರಹಳ್ಳಿಯಲ್ಲಿ ಚಿರತೆ ಮಹಿಳೆಯನ್ನು ಕೊಂದು ಹಾಕಿತ್ತು. ಮಹಿಳೆಯ ರುಂಡವಿಲ್ಲ ದೇಹ ಮಾತ್ರ ಪತ್ತೆಯಾಗಿತ್ತು. ಘಟನೆಯ ಬಳಿಕ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಳೆದೊಂದು ವಾರದಿಂದಲೂ ಕಾರ್ಯಾಚರಣೆ ನಡೆಸುತ್ತಿತ್ತು. ಕೊನೆಗೂ ಇಂದು ಬೆಳಗ್ಗೆ 8:30ಕ್ಕೆ ಇಲಾಖೆ ಇಟ್ಟಿದೆ ಬೋನಿಗೆ ಚಿರತೆ ಬಿದ್ದಿದೆ. ಆದರೆ ಇದೇ ಚಿರತೆ ಮಹಿಳೆಯನ್ನು ಬಲಿ ಪಡೆದಿತ್ತಾ? ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಬೆಟ್ಟದ ತಪ್ಪಲಲ್ಲಿರುವ ಮುದ್ವೀಶ್ವರ ದೇವಾಲಯದ ಬಳಿ ಇಟ್ಟಿದ್ದ ದೊಡ್ಡ ಬೋನಿಗೆ ಚಿರತೆ ಬಿದ್ದಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.