ಮಲೆಬೆಟ್ಟು ನಿವಾಸಿ ಕಿರಣ್ ಎಂಬಾತನ ಹುಟ್ಟುಹಬ್ಬವು, ನ.18 ರಂದು ರಾತ್ರಿ ಗೆಳೆಯರ ಜೊತೆ ಮನೆಯ ಪಕ್ಕದ ರಸ್ತೆಯಲ್ಲಿ ನಡೆದಿದೆ. ಆತನ ಸ್ನೇಹಿತರು ಕೇಕ್ ಮತ್ತು ವಿವಿಧ ರೀತಿಯ ಸ್ಪ್ರೇ ತಂದಿದ್ದರು. ರಸ್ತೆಯಲ್ಲಿ ಸ್ಕೂಟರ್ ಸೀಟ್ ಮೇಲೆ ಕೇಕ್ ಇಟ್ಟು ಕಿರಣ್ ಕ್ಯಾಂಡಲ್ ಗೆ ಬೆಂಕಿ ಹಚ್ಚಿದಾಗ ಗೆಳೆಯರು ಸ್ಪ್ರೇ ಹಾಗೂ ಇನ್ನಿತರ ಕೆಮಿಕಲ್ ಗಳನ್ನು ಸೆಲೆಬ್ರೇಷನ್ ನೆಪದಲ್ಲಿ ಕಿರಣ್ ಮೇಲೆ ಹಾಕಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗದೆ ಸಣ್ಣಪುಟ್ಟ ಗಾಯದೊಂದಿದೆ ಬರ್ತ್ ಡೇ ಬಾಯ್ ಕಿರಣ್ ಪಾರಾಗಿದ್ದಾನೆ ಎನ್ನಲಾಗಿದೆ.
https://youtu.be/N0YdEmp0sVg?si=0cCJlOjXxpOs_zDT
ಘಟನೆಯ ವಿಡಿಯೋ ಗೆಳೆಯರ ಮೊಬೈಲ್ ನಲ್ಲಿ ಸೆರೆಯಾಗಿದೆ.