ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮುಸ್ಲಿಂ ಸಮುದಾಯದ ಓಲೈಕೆ , ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ : ಸರ್ಕಾರದ ವಿರುದ್ಧ ಪ್ರತಿಭಟನೆ , ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹರೀಶ್ ಪೂಂಜಾ:

ಮುಸ್ಲಿಂ ಸಮುದಾಯದ ಓಲೈಕೆ , ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ : ಸರ್ಕಾರದ ವಿರುದ್ಧ ಪ್ರತಿಭಟನೆ , ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹರೀಶ್ ಪೂಂಜಾ:

 

 

 

ಬೆಳ್ತಂಗಡಿ: 1974 ರಲ್ಲಿ ಗುಪ್ತವಾಗಿ ಮಾಡಿದ ನೋಟಿಪೀಕೇಶನ್ ಮತ್ತು ಈಗಿನ ಕಾಂಗ್ರೆಸ್ ಸರಕಾರ ಅತಿಯಾಗಿ ಒಂದು ಸಮುದಾಯವನ್ನು ಒಲೈಕೆ ಮಾಡಲು ಹೊರಟ ಪರಿಣಾಮ ಸಾವಿರಾರು ರೈತರ ಕೃಷಿ ಜಮೀನು ವಕ್ಫ್ ಅಸ್ತಿಯಾಗುತ್ತಿದ್ದು ಇದರಿಂದ ಸಾವಿರಾರು ರೈತರು ಆತ್ಮಹತ್ಯೆ ಮಾಡುವ ಸ್ಥಿತಿ ನಿರ್ಮಾಣ ಆಗಿದೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು. ಅವರು ಭಾನುವಾರ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈಗಿನ ಸರಕಾರ ಗ್ಯಾರಂಟಿ ಯೋಜನೆಯನ್ನು ಜನರಿಗೆ ನೀಡುವ ನೆಪದಲ್ಲಿ ಆಡಳಿತಕ್ಕೆ ಬಂದಿದ್ದು ಈಗ ಜನರಿಗೆ ಸರಿಯಾಗಿ ಗ್ಯಾರಂಟಿ ಯೋಜನೆ ನೀಡದೆ ಜನರನ್ನು ಮೋಸಮಾಡುತ್ತಿದೆ. ಸರಕಾರ ಆರ್ಥಿಕ ದೀವಾಳಿಯಲ್ಲಿದ್ದು ಮಳೆ ಹಾನಿಗೆ ಪರಿಹಾರ ನೀಡುತ್ತಿಲ್ಲ,ರಸ್ತೆ ಅಭಿವೃದ್ಧಿಗೆ ಹಣವಿಲ್ಲ, ಅಂಗವಿಕಲರ ಅನುದಾನ ಬರುತ್ತಿಲ್ಲ,ಸರಕಾರಿ ಶಾಲಾ ಕಟ್ಟಡ ಹಾನಿಗೂ ಹಣ ನೀಡುತ್ತಿಲ್ಲ ಇದೀಗ ವಕ್ಪ್ ಆಸ್ತಿ ಗೊಂದಲ ದಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ ಎಂದರು. ಮೂಡ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿಗಳ ಕುಟುಂಬ ಭಾಗಿಯಾಗಿದೆ .ಎಸ್ ಎಸ್ ಟಿ ಅನುದಾನ ದುರುಪಯೋಗ ಇನ್ನಿತರ ಹಗರಣಗಳಿಂದ ಕಾಂಗ್ರೆಸ್ ಸರಕಾರ ಜನರ ಮುಂದೆ ನಿಲ್ಲಲು ಭಯ ಪಡುತ್ತಿದೆ. ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿ 1500 ವರ್ಷ ಇತಿಹಾಸದ ದೇವಸ್ಥಾನದ ಆಸ್ತಿ ವಕ್ಪ್ ಎಂದು ಪಹಣಿಯಲ್ಲಿ ಬಂದಿದೆ.ಸಚಿವ ಎಮ್ ಬಿ ಪಾಟೀಲ್ ರವರ ಕ್ಷೇತ್ರದಲ್ಲಿ ಇಡೀ ಗ್ರಾಮವೇ ವಕ್ಪ್ ಆಸ್ತಿ ಎಂದು ಬರುತ್ತಿದೆ.ದ.ಕ ಜಿಲ್ಲೆಯಲ್ಲಿ ಕೂಡ ವಕ್ಪ್ ಆಸ್ತಿ ಬಂದ ಬಗ್ಗೆ ಮಾಹಿತಿ ಬಂದಿದೆ. ಒಟ್ಟಾಗಿ ಜನ ಭಯಭಿತರಾಗಿದ್ದಾರೆ. ಜನ ಎಚ್ಚೆತ್ತುಕೊಳ್ಳ ಬೇಕು.ಬಿ ಜೆ ಪಿ ಈ ಬಗ್ಗೆ ಪ್ರತಿ ಮಂಡಲ ವ್ಯಾಪ್ತಿಯಲ್ಲಿ ಮಾಹಿತಿ ಕಲೆಹಾಕುತ್ತಿದ್ದು ಮುಂದಿನ ದಿನಗಳಲ್ಲಿ ಸರಕಾರದ ಈ ಼ಷಡ್ಯಂತ್ರದ ವಿರುದ್ದ ಬ್ರಹತ್ ಪ್ರತಿಭಟನೆ ನಡೆಸಲಿದೆ ಎಂದರು. ಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅದ್ಯಕ್ಷ ಶ್ರಿನಿವಾಸ್ ರಾವ್, ಪ್ರದಾನ ಕಾರ್ಯ ದರ್ಶಿಗಳಾದ ಜಯಾನಂದ ಗೌಡ, ಪ್ರಶಾಂತ್ ಪಾರೆಂಕಿ ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!