ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ: ಪಟ್ಟಣ ಪಂಚಾಯತ್ ನೂತನ ಸಭಾಂಗಣ ಉದ್ಘಾಟನೆ: 'ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಇನ್ನಷ್ಟು ನಡೆಯಲಿ' : ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಪಟ್ಟಣ ಪಂಚಾಯತ್ ನೂತನ ಸಭಾಂಗಣ ಉದ್ಘಾಟನೆ: 'ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಇನ್ನಷ್ಟು ನಡೆಯಲಿ' : ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಈಗಾಗಲೇ ಪಟ್ಟಣ ಪಂಚಾಯತ್ ಆಡಳಿತ ಮಂಡಳಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತಿದ್ದು ಮುಂದೆಯೂ ಇನ್ನಷ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ನಡೆಯಲಿ ಎಂದು ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.

ಅವರು ನ.19ರಂದು ಪಟ್ಟಣ ಪಂಚಾಯತ್ ನ ನೂತನ ಸಭಾಂಗಣ ಲೋಕಾರ್ಪಣಾಗೊಳಿಸಿ ಮಾತನಾಡಿದರು. ಪಟ್ಟಣ ಪಂಚಾಯತ್ ನ ಕಾರ್ಯಕಲಾಪಗಳು ವ್ಯವಸ್ಥಿತ ರೀತಿಯಲ್ಲಿ ನಡೆಯಲು ನೂತನ ಸಭಾಂಗಣ ಲೋಕಾರ್ಪಣೆಗೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಉಪಾಧ್ಯಕ್ಷೆ ಕುಮಾರಿ ಗೌರಿ, ಸದಸ್ಯರುಗಳಾದ ಜಗದೀಶ್, ಶರತ್ ಕುಮಾರ್, ರಜನಿ ಕುಡ್ವ, ತುಳಸಿ, ಅಂಬರೀಶ್, ಜನಾರ್ಧನ್, ಮುಸ್ತಾರ್ ಜಾನ್ ಮೆಹಬೂಬ್, ಲೋಕೇಶ್, ರಾಜಶ್ರೀ ರಮಣ, ನಾಮ ನಿರ್ದೇಶಕ ಸದಸ್ಯರಾದ ಹೆನ್ರಿ ಲೋಬೊ, ಸತೀಶ್ ದೊಡ್ಮನೆ, ಅಬ್ದುಲ್ ಬಷೀರ್, ಹಾಗೂ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಜಯಾನಂದ ಗೌಡ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!