ತಾಯಿ ಆನೆಯೊಂದು ತನ್ನ ಸತ್ತ ಮರಿಯಾನೆಯ ದೇಹವನ್ನು ತನ್ನ ಸೊಂಡಿಲಿನಿಂದ ಎಳೆದುಕೊಂಡು ಹೋಗುತ್ತಿರುವ ಹೃದಯ ವಿದ್ರಾವಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಎಡಿಎಫ್ ಒ ಜಯಂತ್ ಮಂಡಲ್ ರೆಕಾರ್ಡ್ ಮಾಡಿದ್ದು, ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಸಾಮಾಜಿಕ ಸೈಟ್ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ವೀಡಿಯೊಗೆ ಶೀರ್ಷಿಕೆ ನೀಡಿರುವ ಅಧಿಕಾರಿ “ತಾಯಿ ಆನೆ ತನ್ನ ಮಗುವಿನ ಸಾವನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವಳು ಶವವನ್ನು ಕೆಲವು ಸಮಯ-ಕೆಲವೊಮ್ಮೆ ದಿನಗಳವರೆಗೆ ಎಳೆದುಕೊಂಡು ಹೋಗುತ್ತಾಳೆ. ಇದು ತುಂಬಾ ದುಃಖಕರವಾದ ಸಂಗತಿ.' ಎಂದು ಬರೆದುಕೊಂಡಿದ್ದಾರೆ.
https://twitter.com/i/status/1859572181773992343