ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಖ್ಯಾತ ವಕೀಲ ಬೆಂಗಳೂರಿನ ನಾರಾಯಣ ಸ್ವಾಮಿ ಭೇಟಿ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಖ್ಯಾತ ವಕೀಲ ಬೆಂಗಳೂರಿನ ನಾರಾಯಣ ಸ್ವಾಮಿ ಭೇಟಿ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಖ್ಯಾತ ವಕೀಲರಾದ ಬೆಂಗಳೂರಿನ ನಾರಾಯಣ ಸ್ವಾಮಿ ನ.18 ರಂದು ಬೆಳಗ್ಗೆ ಭೇಟಿ ನೀಡಿದರು.

ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಶಿವಣ್ಣ , ಶೇಷ ಕುಮಾರ್, ನಿರಂಜನ್, ಮಂಜುನಾಥ್ ಹಾಗೂ ಚಾಲಕ ಯಾಶೀನ್ ನಾರಾಯಣ್ ಸ್ವಾಮಿ ಜೊತೆಯಲಿದ್ದರು.

ದಿ.ಮುತ್ತಪ್ಪ ರೈ ಆಸ್ತಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ವಕೀಲ ನಾರಾಯಣ ಸ್ವಾಮಿ

ಮುತ್ತಪ್ಪ ರೈ ಮೃತಪಟ್ಟ ಬಳಿಕ ಎರಡನೇ ಪತ್ನಿ ಮತ್ತು ಮಕ್ಕಳ ವಿರುದ್ಧ ಆಸ್ತಿ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ವರ್ಷಗಳ ಬಳಿಕ ವಕೀಲ ನಾರಾಯಣ ಸ್ವಾಮಿ ಮಧ್ಯಸ್ಥಿಕೆ ನಡೆಸಿ ಎರಡನೇ ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ಆಸ್ತಿ ವಿಚಾರದಲ್ಲಿ ಎರಡನೇ ಪತ್ನಿಗೆ ಸುಮಾರು 100 ಕೋಟಿ ರೂಪಾಯಿ ಪಾಲು ಮಾಡಿಸಿ ಕೋರ್ಟ್ ಪ್ರಕರಣ ರಾಜಿಯಲ್ಲಿ ಮುಗಿಸಿದ್ದರು.

ಈ ಬಳಿಕ ನಾರಾಯಣ ಸ್ವಾಮಿ ಮತ್ತಿತರರು ಧರ್ಮಸ್ಥಳ , ಕುಕ್ಕೆ ಸುಬ್ರಮಣ್ಯ, ಸೌತಡ್ಕ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!