ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕೋಟೇಶ್ವರ: ಗಾಳಿ ತುಂಬುವಾಗ ಟಯರ್ ಸ್ಪೋಟ..!: ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದ ಯುವಕ: ಗಂಭೀರ ಗಾಯ..!

ಕೋಟೇಶ್ವರ: ಗಾಳಿ ತುಂಬುವಾಗ ಟಯರ್ ಸ್ಪೋಟ..!: ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದ ಯುವಕ: ಗಂಭೀರ ಗಾಯ..!

ಕುಂದಾಪುರ: ಖಾಸಗಿ ಶಾಲಾ ಬಸ್ಸಿಗೆ ಗಾಳಿ ತುಂಬುವಾಗ ಟಯರ್ ಸ್ಪೋಟಗೊಂಡು ಯುವಕನೋರ್ವ ಗಂಭೀರ ಗಾಯಗೊಂಡ ಘಟನೆ ಕೆಪಿಎಸ್ ಪಿಯು ಕಾಲೇಜ್ ಬಳಿ ಸಂಭವಿಸಿದೆ.

ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಟಯರ್ ಪಂಚರ್ ಶಾಪ್ ನಲ್ಲಿ ಶಾಲಾ ಬಸ್ಸಿನ ಟೈಯರಿಗೆ ಗಾಳಿ ತುಂಬುವ ಸಂದರ್ಭ ಟಯರ್ ಸ್ಪೋಟಗೊಂಡಿದೆ. ಈ ವೇಳೆ ಟಯರ್ ಗೆ ಗಾಳಿ ತುಂಬಿಸುತ್ತಿದ್ದ ಅಬ್ದುಲ್ ರಜೀದ್ (19) ಎಂಬವರು ಗಾಳಿಯಲ್ಲಿ ಮೇಲೆ ಹಾರಿ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಯುವಕನ ಕೈ ಮುರಿತಕ್ಕೊಳಗಾಗಿದೆ.

ತಕ್ಷಣ ಯುವಕನನ್ನು ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!