ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಚಿರತೆಗಾಗಿ ಇಟ್ಟಿದ್ದ ಬೋನಿನಲ್ಲಿ ವ್ಯಕ್ತಿ ಸೆರೆ..!: ಬೋನಿನ ಒಳಗೆ ಹೋಗಿದ್ದಾಗ ಬಾಗಿಲು ಬಂದ್..!: 6 ತಾಸು ಬೋನಿನೊಳಗೆ ಬಾಕಿ..!

ಚಿರತೆಗಾಗಿ ಇಟ್ಟಿದ್ದ ಬೋನಿನಲ್ಲಿ ವ್ಯಕ್ತಿ ಸೆರೆ..!: ಬೋನಿನ ಒಳಗೆ ಹೋಗಿದ್ದಾಗ ಬಾಗಿಲು ಬಂದ್..!: 6 ತಾಸು ಬೋನಿನೊಳಗೆ ಬಾಕಿ..!

ಚಾಮರಾಜನಗರ: ಚಿರತೆಗಾಗಿ ಇಟ್ಟಿದ್ದ ಬೋನಿಗೆ ವ್ಯಕ್ತಿ ಸೆರೆಯಾದ ವಿಚಿತ್ರ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ.

ಜಾನುವಾರುಗಳ ಚಿರತೆ ಮೇಲೆ ನಿರಂತರ ದಾಳಿ ಮಾಡುತ್ತಿದ್ದ ಹಿನ್ನೆಲೆ ಅರಣ್ಯ ಇಲಾಖೆಯು ಮಹಾದೇವಸ್ವಾಮಿ ಎಂಬವರ ಜಮೀನಿನಲ್ಲಿ ತುಮಕೂರು ಮಾದರಿ ಬೋನನ್ನು ಅಳವಡಿಸಿ ಕರು ಕಟ್ಟಿದ್ದರು.

ಹನುಮಯ್ಯ ಚಿರತೆಗಾಗಿ ಇಟ್ಟಿದ್ದ ಬೋನಿನ ಒಳಕ್ಕೆ ಹೋಗಿದ್ದಾಗ ತಕ್ಷಣ ಬಾಗಿಲು ಬಂದ್ ಆಗಿದೆ. ಹೀಗಾಗಿ ಸುಮಾರು 5 - 6 ತಾಸು ಹನುಮಯ್ಯ ಬೋನೊಳಗೆ ಸಮಯ ಕಳೆದಿದ್ದಾರೆ. ಬಳಿಕ ಸ್ಥಳೀಯ ರೈತರೊಬ್ಬರು ಬೋನಿನೊಳಗೆ ವ್ಯಕ್ತಿ ಸೆರೆಯಾಗಿದ್ದನ್ನ ಕಂಡು ಹೌಹಾರಿ, ಸ್ಥಳೀಯರಿಗೆ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಬೋನಿನಲ್ಲಿ ಬಂಧಿಯಾಗಿದ್ದ ವ್ಯಕ್ತಿಯನ್ನು ಮುಕ್ತಗೊಳಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!