ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮಗುವಿನ ತುರ್ತು ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಿದ ಅಂಬ್ಯುಲೆನ್ಸ್: ಉಜಿರೆಯಿಂದ ಮುಂದಕ್ಕೆ ಸಾಗಿದ ಈಶ್ವರ್ ಮಲ್ಪೆ ಅಂಬ್ಯುಲೆನ್ಸ್ :

ಮಗುವಿನ ತುರ್ತು ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಿದ ಅಂಬ್ಯುಲೆನ್ಸ್: ಉಜಿರೆಯಿಂದ ಮುಂದಕ್ಕೆ ಸಾಗಿದ ಈಶ್ವರ್ ಮಲ್ಪೆ ಅಂಬ್ಯುಲೆನ್ಸ್ :

 

 

 

ಬೆಳ್ತಂಗಡಿ:,,ಮಗುವನ್ನು  ತುರ್ತು ಚಿಕಿತ್ಸೆಗಾಗಿ ಮಣಿಪಾಲದಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಈಶ್ವರ್ ಮಲ್ಪೆ ಅವರ ಅಂಬ್ಯುಲೆನ್ಸ್ ನಲ್ಲಿ‌ ಕೊಂಡು ಹೋಗಲಾಗುತಿದ್ದು ಬೆಳ್ತಂಗಡಿ ತಾಲೂಕಿನ ಉಜಿರೆಯಿಂದ ಮುಂದಕ್ಕೆ ಈಗಾಗಲೇ ಸಾಗಿದೆ. ತುರ್ತು ಸಂಚಾರ ಮಾಡಬೇಕಾಗಿರುವುದರಿಂದ ಝೀರೋ ಟ್ರಾಫಿಕ್ ಅವಶ್ಯಕತೆ ಇದ್ದು, ತಾಲೂಕಿನ ವಾಹನ ಸವಾರರಲ್ಲಿ ಸಹಕಾರ ನೀಡುವಂತೆ ಈಶ್ವರ್ ಮಲ್ಪೆ ವಿನಂತಿಸಿಕೊಂಡಿದ್ದು, ಇದಕ್ಕೆ ಸವಾರರು ಸಹಕಾರ ನೀಡುತಿದ್ದಾರೆ.

 

 

 

 

ಸೋಮಂತಡ್ಕ, ಕಕ್ಕಿಂಜೆ, ಚಾರ್ಮಾಡಿ ಮೂಲಕ ಅಂಬ್ಯುಲೆನ್ಸ್ ಸಂಚಾರ ಮಾಡಲಿದೆ. ಅದ್ದರಿಂದ ಈ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನ ಸವಾರರು ಅಂಬ್ಯುಲೆನ್ಸ್ ಸಂಚಾರಕ್ಕೆ ತೊಂದರೆ ಆಗದಂತೆ ದಾರಿ ಬಿಟ್ಟುಕೊಡುವ ಮೂಲಕ ಮಗುವಿನ ತುರ್ತು ಚಿಕಿತ್ಸೆಗೆ ಸ್ಪಂದಿಸಬೇಕಾಗಿ ನಮ್ಮ ವಿನಂತಿಯಾಗಿದೆ. ಈಶ್ವರ್ ಮಲ್ಪೆ ಸೇವಾ ಅಂಬ್ಯುಲೆನ್ಸ್ ನೊಂದಿಗೆ ಇತರ ನಾಲ್ಕು ಅಂಬ್ಯುಲೆನ್ಸ್ ಸಾಥ್ ನೀಡುತ್ತಿವೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!