ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ರಮೇಶ ಮಾದರ ಮತ್ತು ಗಂಗಮ್ಮ ಮಾದರ (ರಾಠೋಡ) ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರದ್ದೂ ಬೇರೆ ಬೇರೆ ಜಾತಿ ಹಿನ್ನೆಲೆಯಲ್ಲಿ ಅಂತರ್ಜಾತಿ ಮದುವೆಗೆ ಗಂಗಮ್ಮ ಮನೆಯವರಿಂದ ತೀವ್ರ ವಿರೋಧ ಎದುರಾಗಿತ್ತು. ಕುಟುಂಬಸ್ಥರ ವಿರೋಧವಿದ್ದರೂ ಇಬ್ಬರೂ ಮದುವೆ ಆಗಿದ್ದರು. ಇದರಿಂದ ಸಿಟ್ಟಿಗೆದ್ದ ಗಂಗಮ್ಮ ಮನೆಯವರು ಹಾಗೂ ಸಂಬಂಧಿಗಳು 2019ರಲ್ಲಿ ಚಾಕುವಿನಿಂದ ಹಲ್ಲೆ ಮಾಡಿ ಇಬ್ಬರನ್ನು ಕೊಲೆ ಮಾಡಿದ್ದರು.
ಈ ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಿದ ಗದಗ ಜಿಲ್ಲಾ ನ್ಯಾಯಾಲಯ ಪ್ರೇಮಿಗಳನ್ನು ಹತ್ಯೆ ಮಾಡಿದ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಿ ಬುಧವಾರ ಆದೇಶ ಹೊರಡಿಸಿದೆ.