ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಸ್ಕಂದ ಸಂಜೀವಿನಿ ಗ್ರಾಮ ಪಂಚಾಯತ್ ಮಹಿಳಾ ಒಕ್ಕೂಟ ಕಲ್ಮಂಜ (ರಿ).: ವಾರ್ಷಿಕ ಮಹಾಸಭೆ ಹಾಗೂ ಪದಗ್ರಹಣ ಕಾರ್ಯಕ್ರಮ: ಸ್ಕಂದ ಸಂಜೀವಿನಿ ಎರೆಹುಳ ಗೊಬ್ಬರ ಮಾರುಕಟ್ಟೆಗೆ ಬಿಡುಗಡೆ

ಸ್ಕಂದ ಸಂಜೀವಿನಿ ಗ್ರಾಮ ಪಂಚಾಯತ್ ಮಹಿಳಾ ಒಕ್ಕೂಟ ಕಲ್ಮಂಜ (ರಿ).: ವಾರ್ಷಿಕ ಮಹಾಸಭೆ ಹಾಗೂ ಪದಗ್ರಹಣ ಕಾರ್ಯಕ್ರಮ: ಸ್ಕಂದ ಸಂಜೀವಿನಿ ಎರೆಹುಳ ಗೊಬ್ಬರ ಮಾರುಕಟ್ಟೆಗೆ ಬಿಡುಗಡೆ

ಕಲ್ಮಂಜ: ಸ್ಕಂದ ಸಂಜೀವಿನಿ ಗ್ರಾಮ ಪಂಚಾಯತ್ ಮಹಿಳಾ ಒಕ್ಕೂಟ ಕಲ್ಮಂಜ (ರಿ). ಇದರ ವಾರ್ಷಿಕ ಮಹಾಸಭೆಯು ಜ.17ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷರಾದ ಶೋಭ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ದೀಪ ಬೆಳಗಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಜೀವಿನಿಯಿಂದ ಪಿಎಂಎಫ್ ಎಮ್ ಇ ಮತ್ತು ಸಿಐಎಫ್ ಪಡೆದು ಸ್ವಾವಲಂಬಿ ಜೀವನ ನಡೆಸುತ್ತಿರುವ ಸದಸ್ಯೆ ಎಂಬಿಕೆ ಪುಷ್ಪ ಅವರನ್ನು ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ವಲಯ ಮೇಲ್ವಿಚಾರಕರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.

ಎರೆಹುಳ ಗೊಬ್ಬರವನ್ನು ಉತ್ಪಾದಕರ ಗುಂಪಿನಿಂದ ಸ್ಕಂದ ಸಂಜೀವಿನಿ ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಸದಸ್ಯರು ಬೆಳೆದ ತರಕಾರಿ ಗಳನ್ನು ಮಾರಾಟಕ್ಕೆ ಇಡಲಾಯಿತು.

ಒಕ್ಕೂಟದ ವಾರ್ಷಿಕ ವರದಿ ಜಮಾ ಖರ್ಚು ವಿವರವನ್ನು ಎಂಬಿಕೆ ಓದಿ ಹೇಳಿ ಅನುಮೋದನೆ ಪಡೆಯಲಾಯಿತು. ಒಕ್ಕೂಟದ ವತಿಯಿಂದ ಸಂಜೀವಿನಿ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

ವಲಯ ಮೇಲ್ವಿಚಾರಕರಾದ ಜಯಾನಂದ್ ಸರ್ ಸಂಜೀವಿನಿ ಯೋಜನೆಯ ಸವಿಸ್ತಾರವಾದ ಮಾಹಿತಿಯನ್ನು ಸದಸ್ಯರಿಗೆ ನೀಡಿದರು. ಮಹಾಸಭೆಯಲ್ಲಿ ಲಕ್ಕಿ ಮಹಿಳೆಯನ್ನು ಗುರುತಿಸಿ ಬಹುಮಾನ ನೀಡಲಾಯಿತು. ಹಳೆ ಸದಸ್ಯರಿಗೆ ಕಿರು ಕಾಣಿಕೆ ನೀಡಿ ಬೀಳ್ಕೊಡಲಾಗಿದ್ದು, ಬಳಿಕ ಪದಗ್ರಹಣ ಕಾರ್ಯಕ್ರಮವನ್ನು ನಡೆಸಲಾಯಿತು. ಒಕ್ಕೂಟದ ವತಿಯಿಂದ ಸಂಜೀವಿನಿ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಬಳಿಕ ಸಂಘದ ಸದಸ್ಯರು ಹಾಡು ನೃತ್ಯವನ್ನು ಮಾಡಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಿವಾನಿ ಸಂಜೀವಿನಿ ಸದಸ್ಯೆ ಮಮತಾ ಸ್ವಾಗತಿಸಿ, ಪ್ರಸಿದ್ಧಿ ಸಂಜೀವಿನಿ ಸದಸ್ಯೆ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ದೀಪ ಸಂಜೀವಿನಿ ಸದಸ್ಯೆ ಶುಭ ಧನ್ಯವಾದವಿತ್ತರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!