ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ನಟಿಸುವಾಗಲೇ ಹೃದಯಾಘಾತ: ಖ್ಯಾತ ನಟ ಸುದೀಪ್ ಪಾಂಡೆ ನಿಧನ..!

ನಟಿಸುವಾಗಲೇ ಹೃದಯಾಘಾತ: ಖ್ಯಾತ ನಟ ಸುದೀಪ್ ಪಾಂಡೆ ನಿಧನ..!

ನಟಿಸುವಾಗಲೇ ಹೃದಯಾಘಾತ ಸಂಭವಿಸಿ ಖ್ಯಾತ ನಟ ಮತ್ತು ನಿರ್ಮಾಪಕ ಸುದೀಪ್ ಪಾಂಡೆ ನಿಧನ ಹೊಂದಿದ್ದಾರೆ.

ಜನವರಿ 5ರಂದು ಸುದೀಪ್ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಇದಾಗಿ 10 ದಿನಕ್ಕೆ ಅಂದ್ರೆ ಜನವರಿ 15ರಂದು ಅವರು ಕೊನೆಯುರೆಳೆದಿದ್ದಾರೆ. ನಟನ ಸಾವಿನ ಸುದ್ದಿ ಅವರ ಅಭಿಮಾನಿಗಳಿಗೆ ಹಾಗೂ ಭೋಜ್ಪುರಿ ಇಂಡಸ್ಟ್ರಿಗೆ ಬರಸಿಡಿಲು ಬಡಿದಂತೆ ಆಗಿದೆ.

ಹಲವು ವರ್ಷಗಳಿಂದ ಭೋಜ್ಪುರಿ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದ ಇವರು, ನಟನೆಯ ಜೊತೆಗೆ ನಿರ್ಮಾಣದಲ್ಲೂ ತೊಡಗಿಕೊಂಡಿದ್ದರು. ರಾಜಕೀಯದಲ್ಲೂ ಸಕ್ರಿಯರಾಗಿದ್ದರು. ಅವರ ಸಾವು ಭೋಜ್ಪುರಿ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.

ಸುದೀಪ್ ಪಾಂಡೆ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಅವರ ಸ್ನೇಹಿತರೊಬ್ಬರು ಹೇಳಿದ್ದಾರೆ. ‘ವಿಕ್ಟರ್’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಚಿತ್ರ ಫ್ಲಾಪ್ ಆದ ಕಾರಣ ಸುದೀಪ್ ತಮ್ಮ ಎಲ್ಲಾ ಹಣವನ್ನು ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿದ್ದರು.

2007ರಲ್ಲಿ ಚಿತ್ರರಂಗಕ್ಕೆ ಬಂದ ಸುದೀಪ್ ಪಾಂಡೆ ಅವರು ಮೊದಲು ‘ಭೋಜ್‌ಪುರಿಯಾ ಭಯ್ಯಾ’ ಸಿನಿಮಾದಲ್ಲಿ ನಟಿಸಿ ಕಡಿಮೆ ಸಮಯದಲ್ಲಿ ಖ್ಯಾತಿ ಪಡೆದರು. ಅವರು ಆ್ಯಕ್ಷನ್ ಹೀರೋ ಆಗಿ ಗುರುತಿಸಿಕೊಂಡು, ‘ಖೂನಿ ದಂಗಲ್’ ‘ಮಸಿಹಾ ಬಾಬು’, ‘ಹಮರ್ ಸಂಗಿ ಬಜರಂಗಿ ಬಲಿ’, ‘ಹಮಾರ್ ಲಾಲ್ಕರ್’, ‘ಶರಾಬಿ’, ‘ಖುರಬಾನಿ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!