ಗ್ರಾಮೀಣ ಜನತೆಯ ಸಂಚಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಶಾಸಕರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಆ ಪ್ರಕಾರ ಕರ್ನಾಟಕ ಸರಕಾರವು ಲೋಕೋಪಯೋಗಿ ಇಲಾಖೆಯ ಮೂಲಕ ಈ ಕೆಳಗಿನ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳಿಸಿದೆ.
ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಮರಕಡದಿಂದ ಪುದುವೆಟ್ಟು ಗ್ರಾಮದ ಮಿಯ್ಯಾರು ಸಂಪರ್ಕ ರಸ್ತೆ ಅಭಿವೃದ್ಧಿ - ರೂ.4.00 ಕೋಟಿ ಧರ್ಮಸ್ಥಳ - ತೋಟತ್ತಾಡಿ - ಚಿಬಿದ್ರೆ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ - ರೂ.2.00 ಕೋಟಿ ಪುಯ್ಯ - ಉಳಿಯ - ಕಂಚಿನಡ್ಕ - ಮುರ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ - ರೂ.1.00 ಕೋಟಿ ನಾರಾವಿ - ಪಾಣಾಲು - ಮಾವಿನಕಟ್ಟೆ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ - ರೂ.1.00 ಕೋಟಿ ಧರ್ಮಸ್ಥಳ ಮುಂಡಾಜೆ ರಸ್ತೆಯಲ್ಲಿ ಆಯ್ದ ಭಾಗಗಳಲ್ಲಿ ಸೇತುವೆ ನಿರ್ಮಾಣ - ರೂ.3.75 ಕೋಟಿ ಉಜಿರೆ - ಇಂದಬೆಟ್ಟು ರಸ್ತೆಯ ಅಂಬಡಬೆಟ್ಟು ಎಂಬಲ್ಲಿ ಸೇತುವೆ ನಿರ್ಮಾಣ - ರೂ.2.50 ಕೋಟಿ ಬಿಡುಗಡೆಗೊಂಡಿದ್ದು ಶೀಘ್ರವೇ ಕಾಮಗಾರಿ ಚಾಲನೆಯಾಗಲಿದೆ.