ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕೆಟ್ಟು ನಿಂತಿದ್ದ ಲಾರಿ ಏಕಾಏಕಿ ಬೆಂಕಿಗಾಹುತಿ..!: ಲಾರಿಯಲ್ಲಿ ಮಲಗಿದ್ದ ಚಾಲಕ ಪ್ರಾಣಾಪಾಯದಿಂದ ಪಾರು..!

ಕೆಟ್ಟು ನಿಂತಿದ್ದ ಲಾರಿ ಏಕಾಏಕಿ ಬೆಂಕಿಗಾಹುತಿ..!: ಲಾರಿಯಲ್ಲಿ ಮಲಗಿದ್ದ ಚಾಲಕ ಪ್ರಾಣಾಪಾಯದಿಂದ ಪಾರು..!

ಚಿಕ್ಕಮಗಳೂರು: ಕೆಟ್ಟು ನಿಂತಿದ್ದ ಲಾರಿ ಮಧ್ಯ ರಾತ್ರಿ ಏಕಾಏಕಿ ಹೊತ್ತಿ ಉರಿದ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಮಂಜೀಹಳ್ಳಿ ಸಮೀಪ ನಡೆದಿದೆ.

ಚಿಕ್ಕಮಗಳೂರಿನಿಂದ ಅರಸೀಕೆರೆಗೆ ಹೋಗುತ್ತಿದ್ದ ಲಾರಿ, ನಿನ್ನೆ ಸಂಜೆ 5 ಗಂಟೆ ವೇಳೆಗೆ ಮಂಜೀಹಳ್ಳಿ ಸಮೀಪ ಕೆಟ್ಟು ನಿಂತಿತ್ತು. ಹೀಗಾಗಿ ಬೆಳಗ್ಗೆ ರಿಪೇರಿಗೆ ಜನ ಬರುತ್ತಾರೆಂದು ಲಾರಿಯಲ್ಲೇ ಚಾಲಕ ಲಾರಿಯಲ್ಲೇ ಮಲಗಿದ್ದ. ಆದರೆ ಮಧ್ಯ ರಾತ್ರಿ 12:30 ರ ಸುಮಾರಿಗೆ ಲಾರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಲಾರಿಯಿಂದ ಚಾಲಕ ಇಳಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಲಾರಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!