ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ: ಹೊಸ ನ್ಯಾಯಾಲಯ ಕಟ್ಟಡ ಮಂಜೂರುಗೊಳಿಸುವಂತೆ ಲೋಕೋಪಯೋಗಿ ಸಚಿವರಿಗೆ ವಕೀಲರ ನಿಯೋಗದಿಂದ ಮನವಿ

ಬೆಳ್ತಂಗಡಿ: ಹೊಸ ನ್ಯಾಯಾಲಯ ಕಟ್ಟಡ ಮಂಜೂರುಗೊಳಿಸುವಂತೆ ಲೋಕೋಪಯೋಗಿ ಸಚಿವರಿಗೆ ವಕೀಲರ ನಿಯೋಗದಿಂದ ಮನವಿ

ಬೆಳ್ತಂಗಡಿ: ಹೊಸ ನ್ಯಾಯಾಲಯ ಕಟ್ಟಡ ಮಂಜೂರುಗೊಳಿಸುವಂತೆ ಲೋಕೋಪಯೋಗಿ ಸಚಿವರಿಗೆ ವಕೀಲರ ನಿಯೋಗದಿಂದ ಮನವಿ ನೀಡಲಾಗಿದೆ.

ಸುಮಾರು 60 ವರ್ಷ ಹಳೆಯದಾದ ಬೆಳ್ತಂಗಡಿಯ ನ್ಯಾಯಾಲಯದ ಕಟ್ಟಡ ನಾದುರಸ್ತಿಯಲ್ಲಿದ್ದು ಹೊಸ ನ್ಯಾಯಾಲಯದ ಕಟ್ಟಡಕ್ಕೆ ಅನುದಾನ ಮಂಜೂರುಗೊಳಿಸುವಂತೆ ಬೆಳ್ತಂಗಡಿ ವಕೀಲರ ಸಂಘದ ನಿಯೋಗ ಈ ದಿನ ಕರ್ನಾಟಕ ಸರಕಾರದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿರವರನ್ನು ಫೆ.18ರಂದು ಮಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯವಾದಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಹಿರಿಯ ವಕೀಲರ ಸಮಿತಿಯ ಅಧ್ಯಕ್ಷರಾದ ಅಲೋಶಿಯಸ್ ಎಸ್ ಲೋಬೊ, ವಕೀಲರ ಸಂಘದ ಉಪಾಧ್ಯಕ್ಷರಾದ ಅಶೋಕ್ ಕರಿಯನೆಲ, ಪ್ರಧಾನ ಕಾರ್ಯದರ್ಶಿ ನವೀನ್ ಬಿ ಕೆ, ಮತ್ತು ಹಿರಿಯ ವಕೀಲರಾದ ಬಿ ಎಂ ಭಟ್ ಮತ್ತು ಶ್ರೀನಿವಾಸ ಗೌಡ ಜೊತೆಗಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!