ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಟ್ರಾಲಿ ಬ್ಯಾಗ್ ಒಳಗೆ ಮಹಿಳೆಯ ರಕ್ತಸಿಕ್ತ ಶವ ಪತ್ತೆ: ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಮ್ಮ-ಮಗಳು!

ಟ್ರಾಲಿ ಬ್ಯಾಗ್ ಒಳಗೆ ಮಹಿಳೆಯ ರಕ್ತಸಿಕ್ತ ಶವ ಪತ್ತೆ: ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಮ್ಮ-ಮಗಳು!

ಕೋಲ್ಕತ್ತಾ: ಶವ ತುಂಬಿದ್ದ ಸೂಟ್‌ಕೇಸ್ ನದಿಗೆ ಎಸೆಯಲು ಹೋಗಿ ಇಬ್ಬರು ಮಹಿಳೆಯರು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಗಂಗಾನದಿಯಲ್ಲಿ ಸೂಟ್‌ಕೇಸ್‌ನ್ನು ವಿಲೇವಾರಿ ಮಾಡಲು ಯತ್ನಿಸುತ್ತಿದ್ದ ಫಲ್ಗುಣಿ ಘೋಷ್ ಮತ್ತು ಆಕೆಯ ತಾಯಿ ಆರತಿ ಘೋಷ್ ಎಂಬ ಇಬ್ಬರನ್ನು ಸ್ಥಳೀಯರು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಮೃತದೇಹವನ್ನು ಫಲ್ಗುಣಿ ಘೋಷ್ ಅವರ ಮಾವನ ಸಹೋದರಿ ಸುಮಿತಾ ಘೋಷ್ (55) ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಉತ್ತರ ಕೋಲ್ಕತ್ತಾದ ಕುಮಾರ್ತುಲಿಯ ಗಂಗಾ ನದಿಯ ದಡದ ಬಳಿ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಇಬ್ಬರು ಮಹಿಳೆಯರು ನೀಲಿ ಬಣ್ಣದ ಟ್ರಾಲಿ ಬ್ಯಾಗ್‌ನೊಂದಿಗೆ ಕಾಣಿಸಿಕೊಂಡಿದ್ದರು. ಸ್ಥಳೀಯರು ಅವರ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ್ದು, ಆರಂಭದಲ್ಲಿ ಮಹಿಳೆಯರು ಬ್ಯಾಗ್ ತೆರೆಯಲು ನಿರಾಕರಿಸಿದರು. ಬಳಿಕ ಜೋರು ಧ್ವನಿಯಲ್ಲಿ ಕೇಳಿದಾಗ ತಮ್ಮ ಸಾಕು ನಾಯಿ ಸತ್ತು ಹೋಗಿತ್ತು ಅದರ ದೇಹವನ್ನು ನೀರಿನಲ್ಲಿ ಹಾಕಲು ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದರು. ಇದು ಮತ್ತಷ್ಟು ಅನುಮಾನಕ್ಕೆ ಕಾರಣವಾಯಿತು, ಆದರೆ ಅವರು ಬ್ಯಾಗ್‌ನ ಜಿಪ್ ತೆಗೆಯಲು ಸಿದ್ಧರಿರಲಿಲ್ಲ.

ಈ ಮಧ್ಯೆ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರು ಸ್ಥಳಕ್ಕೆ ಬಂದು, ಟ್ರಾಲಿ ಬ್ಯಾಗ್ ಅನ್ನು ಬಲವಂತವಾಗಿ ತೆಗೆಸಿದ್ದಾರೆ. ಆಗ ಬ್ಯಾಗ್ ಒಳಗೆ ಮಹಿಳೆಯ ರಕ್ತಸಿಕ್ತ ಶವ ಪತ್ತೆಯಾಗಿದೆ.

ಅಸ್ಸಾಂನ ಜೋರ್ಹತ್ ಮೂಲದ ಸುಮಿತಾ ತನ್ನ ಪತಿಯಿಂದ ಬೇರ್ಪಟ್ಟಿದ್ದು, ಫೆಬ್ರವರಿ 11 ರಿಂದ ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ತಾಯಿ-ಮಗಳೊಂದಿಗೆ ವಾಸಿಸುತ್ತಿದ್ದರು. ಆದರೆ ಈ ಮೂವರ ಮಧ್ಯೆ ಜಗಳ ನಡೆದು, ಆರೋಪಿ ಫಲ್ಗುಣಿ, ಮೃತಳನ್ನು ಗೋಡೆಗೆ ತಳ್ಳಿದ್ದರಿಂದ ಆಕೆ ಪ್ರಜ್ಞೆತಪ್ಪಿ ಬಿದ್ದಿದ್ದಳು. ಪ್ರಜ್ಞೆ ಮರಳಿ ಬಂದಾಗ, ದೊಡ್ಡ ಜಗಳವೇ ನಡೆಯಿತು. ಬಳಿಕ ಫಲ್ಗುಣಿ, ಮೃತ ಸುಮಿತಾ ಅವಳ ಮುಖ ಮತ್ತು ಕುತ್ತಿಗೆಗೆ ಇಟ್ಟಿಗೆಯಿಂದ ಹೊಡೆದ ಕಾರಣ ಆಕೆ ಸಾವನ್ನಪ್ಪಿದ್ದಳು. ನಂತರ ತಾಯಿ-ಮಗಳು ಶವವನ್ನು ಟ್ರಾಲಿ ಬ್ಯಾಗಿನಲ್ಲಿ ಹಾಕಿ ನದಿಗೆ ಎಸೆಯಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಬಂಧಿಸಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!