ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಹಳದಿ ಕಾಲಿನ ಹಸಿರು ಪಾರಿವಾಳ ಕ್ಯಾಮೆರಾದಲ್ಲಿ ಸೆರೆ!

ಹಳದಿ ಕಾಲಿನ ಹಸಿರು ಪಾರಿವಾಳ ಕ್ಯಾಮೆರಾದಲ್ಲಿ ಸೆರೆ!

ದಾಂಡೇಲಿ: ಅಪರೂಪದ ಪಾರಿವಾಳವೊಂದು ದಾಂಡೇಲಿಯ ಹವ್ಯಾಸಿ ಛಾಯಾಗ್ರಾಹಕ ಹಾಗೂ ಪಕ್ಷಿ ಪ್ರೇಮಿ ರಾಹುಲ್ ಬಾವಾಜಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಗರದ ಬಂಗೂರನಗರ ಜೂನಿಯರ್ ಕಾಲೇಜಿನ ಹತ್ತಿರದ ಆಲದ ಮರದಲ್ಲಿ ಹಳದಿ ಕಾಲಿನ ಹಸಿರು ಪಾರಿವಾಳ (ವೈಜ್ಞಾನಿಕ ಹೆಸರು ಟ್ರೆರಾನ್ ಫಿನಿಕಾಪ್ಟೆರಸ್) ಶನಿವಾರ ಕಾಣಿಸಿಕೊಂಡಿದೆ.

ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ಕೆಲವು ಭಾಗಗಳಲ್ಲಿ ಕಂಡುಬರುವ ಹಸಿರು ಪಾರಿವಾಳ ಮಹಾರಾಷ್ಟ್ರದ ರಾಜ್ಯ ಪಕ್ಷಿ. ಇವುಗಳು ಹಿಂಡು ಹಿಂಡಾಗಿ ಹೆಚ್ಚಾಗಿ ದಟ್ಟವಾದ ಅರಣ್ಯ ಪ್ರದೇಶಗಳ ಆಲದ ಮರಗಳಲ್ಲಿ ಕಂಡುಬರುತ್ತವೆ. ಆದರೆ ಅಪರೂಪಕ್ಕೆ ನಗರ ಪ್ರದೇಶದ ಆಲದ ಮರದಲ್ಲಿ ಕಂಡುಬರುತ್ತವೆ ಎಂದು ಪಕ್ಷಿ ಪ್ರೇಮಿ ರಾಹುಲ್ ಬಾವಾಜಿ ಅವರು ಮಾಹಿತಿ ನೀಡಿದ್ದಾರೆ.

ಮರಾಠಿಯಲ್ಲಿ ಹರೋಲಿ ಅಥವಾ ಹರಿಯಲ್ ಎಂದು ಕರೆಯಲಾಗುತ್ತದೆ. ಅಸ್ಸಾಂನಲ್ಲಿ ಹೈಥಾ ಮತ್ತು ಹೈಟೋಲ್ ಎಂದು ಸಹ ಕರೆಯುತ್ತಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!