ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಅಭಿವೃದ್ಧಿಯ ಕನಸು ಹುಸಿಯಾಗಿಸಿದ ರಾಜ್ಯದ ಬಜೆಟ್: ಆರ್ಥಿಕ ಪ್ರಗತಿ ಕುಂಠಿತ ಶಾಸಕ ಹರೀಶ್ ಪೂಂಜ ಕಳವಳ:

ಅಭಿವೃದ್ಧಿಯ ಕನಸು ಹುಸಿಯಾಗಿಸಿದ ರಾಜ್ಯದ ಬಜೆಟ್: ಆರ್ಥಿಕ ಪ್ರಗತಿ ಕುಂಠಿತ ಶಾಸಕ ಹರೀಶ್ ಪೂಂಜ ಕಳವಳ:

 

 

ಬೆಳ್ತಂಗಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಿದ 2025- 26ರ ಸಾಲಿನ ಮುಂಗಡ ಪತ್ರ ನಕ್ಸಲರಿಗೆ ಶರಣಾಗಿ ಶ್ರೀಸಾಮಾನ್ಯರ ಪಾಲಿಗೆ ಸಂಪೂರ್ಣ ನಿರಾಶದಾಯಕವಾಗಿದೆಯೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಬೇಸರ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ನಕ್ಸಲ್ ಚಟುವಟಿಕೆ ಬಗ್ಗೆ ಪೂರ್ಣ ಅರಿವಿದ್ದಂತೆ ಕೇವಲ ಆರು ಜನರ ನಕ್ಸಲರ ಶರಣಗಾತಿಯಿಂದ ನಕ್ಸಲ್ ನಿಗ್ರಹ ಪಡೆಯನ್ನೇ ವಿಸರ್ಜಿಸಿ 10 ಕೋಟಿ ವಿಶೇಷ ಪ್ಯಾಕೇಜ್ ನೀಡಿದ್ದನ್ನು ಗಮನಿಸಿದರೆ ನಕ್ಸಲರು ಸರ್ಕಾರಕ್ಕೆ ಶರಣಾಗಿದ್ದರೋ ಅಥವಾ ಸರ್ಕಾರವೇ ನಕ್ಸಲರಿಗೆ ಶರಣಾಯಿತೋ ಎಂಬಂತಿದೆ.

ಯೋಜನಾಬದ್ಧವಲ್ಲದ ಯೋಚನೆಗಳಿಂದ ಕರ್ನಾಟಕ ರಾಜ್ಯದ ವಿತ್ತೀಯ ಶಿಸ್ತು ಹಳಿತಪ್ಪಿ ಮೂಲ ಸೌಕರ್ಯಗಳ ಅಭಿವೃದ್ಧಿ ಕುಂಠಿತದೊಂದಿಗೆ ರಾಜ್ಯದ ಜನತೆ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ. ಕಳೆದ ಸಾಲಿನ ಮುಂಗಡ ಪತ್ರದಲ್ಲಿ ವಿವಿಧ ಇಲಾಖೆಗಳಿಗೆ ಘೋಷಿಸಿದ ಅನುದಾನ ಅನುಷ್ಠಾನವಾಗದೆ ದುರುಪಯೋಗವಾಗಿದ್ದು ಈ ಬಾರಿಯೂ ಮುಖ್ಯಮಂತ್ರಿಗಳ ಬಜೆಟ್ ಭಾಷಣದಲ್ಲಿ ಎಂದಿನಂತೆ ಅಲ್ಪ ಸಂಖ್ಯಾತರ ತುಷ್ಟೀಕರಣ, ಮೂಲ ಸೌಕರ್ಯ, ಶಿಕ್ಷಣ, ಆರೋಗ್ಯ, ಇಂಧನ ಕೃಷಿ ಇಲಾಖೆಗಳ ಕಡೆ ಗಣನೆ ಎದ್ದು ಕಾಣುತ್ತಿದೆ. ಒಟ್ಟಾರೆಯಾಗಿ ರಾಜ್ಯದ ಆರ್ಥಿಕ ಪ್ರಗತಿ ಕುಂಠಿತವಾಗುತ್ತಿರುವುದರ ಬಗ್ಗೆ ತೀವ್ರವಾದ ಕಳವಳವನ್ನು ಶಾಸಕ ಹರೀಶ್ ಪೂಂಜ ಪ್ರಕಟಣೆ ಮೂಲಕ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!