ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಭಾರೀ ಗಾಳಿಗೆ ರಸ್ತೆಗೆ ಉರುಳಿಬಿದ್ದ ಬೃಹತ್ ಗಾತ್ರದ  ಮರ:ಸ್ಥಳೀಯರ ಸಹಕಾರದಲ್ಲಿ ತೆರವುಗೊಳಿಸಿದ ಲಾಯಿಲ ಗ್ರಾಮ ಪಂಚಾಯತ್:

ಭಾರೀ ಗಾಳಿಗೆ ರಸ್ತೆಗೆ ಉರುಳಿಬಿದ್ದ ಬೃಹತ್ ಗಾತ್ರದ  ಮರ:ಸ್ಥಳೀಯರ ಸಹಕಾರದಲ್ಲಿ ತೆರವುಗೊಳಿಸಿದ ಲಾಯಿಲ ಗ್ರಾಮ ಪಂಚಾಯತ್:

 

 

ಬೆಳ್ತಂಗಡಿ:  ಮಳೆಯೊಂದಿಗೆ ಬೀಸಿದ ಭಾರೀ ಗಾಳಿಗೆ ತಾಲೂಕಿನ ಹಲವೆಡೇ ವಿಪರೀತ ಹಾನಿ ಬುಧವಾರ ಸಂಭವಿಸಿದೆ. ಲಾಯಿಲ ಗ್ರಾಮದ ಮೂರನೇ ವಾರ್ಡಿನ ಸಂಗಾತಿ ನಗರ ಎಂಬಲ್ಲಿ ದೊಡ್ಡ ಮರವೊಂದು ರಸ್ತೆಗೆ ಉರುಳಿಬಿದ್ದು ಸಾರ್ವಜನಿಕರಿಗೆ ತೊಂದರೆಯಾಗಿತ್ತಲ್ಲದೇ ವಿದ್ಯುತ್ ಕಂಬಗಳಿಗೂ ಹಾನಿ ಉಂಟಾಗಿತ್ತು. ಈ ಬಗ್ಗೆ ಕಾರ್ಯಪೃವೃತ್ತರಾದ ಸ್ಥಳೀಯ ಗ್ರಾಮ‌ ಪಂಚಾಯತ್ ಸದಸ್ಯರಾದ ಗಣೇಶ್, ಆರ್, ಅರವಿಂದ ಕುಮಾರ್, ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ್ ಸ್ಥಳೀಯರ ಹಾಗೂ ಪಂಚಾಯತ್ ಸಹಕಾರದಲ್ಲಿ ರಸ್ತೆಗೆ ಉರುಳಿ ಬಿದ್ದ ಮರವನ್ನು ತೆರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.  ಈ ಬಗ್ಗೆ  ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಲಾಯಿಲ  ಗ್ರಾಮದ ಹಲವು ಕಡೆಗಳಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು , ತಂತಿಗಳು ತುಂಡಾಗಿ ಬಿದ್ದು ವಿದ್ಯುತ್ ವ್ಯತ್ಯಾಯ ಉಂಟಾಗಿದೆ. ಈಗಾಗಲೇ ಮೆಸ್ಕಾಂ ಪವರ್ ಮ್ಯಾನ್ ಗಳು ಸರಿಪಡಿಸಲು ಬೇಕಾದ ಕ್ರಮಗಳನ್ನು ಕೈಗೊಂಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!