ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಅತಿದೊಡ್ಡ ಹೂವಿನ ರಂಗೋಲಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ: ಬೆಳ್ತಂಗಡಿಯ ಶ್ರದ್ಧಾ ಶೆಟ್ಟಿಯಿಂದ ವಿಶೇಷ ಸಾಧನೆ:

ಅತಿದೊಡ್ಡ ಹೂವಿನ ರಂಗೋಲಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ: ಬೆಳ್ತಂಗಡಿಯ ಶ್ರದ್ಧಾ ಶೆಟ್ಟಿಯಿಂದ ವಿಶೇಷ ಸಾಧನೆ:

 

 

ಬೆಳ್ತಂಗಡಿ: ತಾಲೂಕಿನ ಲಾಯಿಲಾ ಗ್ರಾಮದ ಎಣಿಂಜೆಯ ಬಾಲಕಿ ಶ್ರದ್ಧಾ ಶೆಟ್ಟಿ ಹೂವಿನಿಂದ ಮಾಡಿದ ರಂಗೋಲಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಲಭಿಸಿದೆ.

 

 

ಹೂವಿನಿಂದ ಮಾಡಿದ ಅತಿ ದೊಡ್ಡ ರಂಗೋಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ರಂಗೋಲಿಗೆ ಕೆಂಗುಲಾಬಿ, ಮಲ್ಲಿಗೆ, ಕೇಸರಿ ಹಾಗೂ ಹಳದಿ ಬಣ್ಣದ ಚೆಂಡು ಹೂ ಸೇರಿದಂತೆ ವಿವಿಧ ಬಣ್ಣಗಳ ಹೂಗಳನ್ನು ಬಳಸಿ ರಂಗೋಲಿ ರಚಿಸಲಾಗಿತ್ತು. ಈ ರಂಗೋಲಿ 8 ಫೀಟ್ ಅಗಲದಲ್ಲಿದ್ದು ಸುಮಾರು 1 ಗಂಟೆ 40 ನಿಮಿಷದಲ್ಲಿ ರಚಿಸಿದ್ದು ಗಮನ ಸೆಳೆದಿತ್ತು.

 

 

ಇಂಡಿಯಾ ಬುಕ್ ಆಫ್ ಕಾರ್ಡ್ಸ್ ನಲ್ಲಿ ಅತೀ ದೊಡ್ಡ ಹೂವಿನ ರಂಗೋಲಿ ಎಂದು ಸೇರ್ಪಡೆಯಾಗಿರುವ ವಿಚಾರ 2025ರ ಫೆಬ್ರವರಿ 3ರಂದೇ ದೃಢಪಟ್ಟಿತ್ತು, ಆದರೆ ಸರ್ಟಿಫಿಕೇಟ್ ಅಧಿಕೃತವಾಗಿ ಎಪ್ರಿಲ್ 4 ರಂದು ಶ್ರದ್ಧಾ ಶೆಟ್ಟಿ ಕೈ ಸೇರಿದ ಕಾರಣ ಕುಟುಂಬ ಸಂತಸ ಹಂಚಿಕೊಂಡಿದೆ. ಶ್ರದ್ಧಾ ಪ್ರಸ್ತುತ ಎಸ್.ಡಿ.ಎಂ.ನಲ್ಲಿ ಬಿ.ಎಸ್.ಸಿ ಅಧ್ಯಯನ ಮಾಡುತ್ತಿದ್ದು, ಈ ವಿಭಿನ್ನ ಗೌರವ ಲಭಿಸಿದ್ದು ಸಂತಸ ತಂದಿದೆ ಎಂದು ಪ್ರಜಾಪ್ರಕಾಶ ತಂಡದ ಜೊತೆ ಖುಷಿ ಹಂಚಿಕೊಂಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!