ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ, ಶಟರ್ ಮುರಿದು ಅಡಿಕೆ ಅಂಗಡಿಗೆ ನುಗ್ಗಿದ ಕಳ್ಳರು:

ಬೆಳ್ತಂಗಡಿ, ಶಟರ್ ಮುರಿದು ಅಡಿಕೆ ಅಂಗಡಿಗೆ ನುಗ್ಗಿದ ಕಳ್ಳರು:

 

 

ಬೆಳ್ತಂಗಡಿ: ಶಟರ್ ಮುರಿದು ಅಡಿಕೆ ಅಂಗಡಿಯೊಳಗೆ ಕಳ್ಳರು ನುಗ್ಗಿದ ಘಟನೆ ಮಂಗಳವಾರ ನಡೆದಿದೆ. ಸಂತೆಕಟ್ಟೆ ಬಳಿಯ ಅಡಿಕೆ ಅಂಗಡಿಗೆ ಮಧ್ಯರಾತ್ರಿ ಅಂಗಡಿಯ ಒಂದು ಬದಿಯ ಶಟರ್ ಮುರಿದು ಒಳ ಹೊಕ್ಕ ಕಳ್ಳರು ಅಂಗಡಿಯಲ್ಲಿದ್ದ ಹಣವನ್ನು ದೋಚಿದ್ದಾರೆ. ಮಂಗಳವಾರ ಬೆಳಗ್ಗೆ ಶಟರ್ ಮುರಿದಿರುವುದು ಸ್ಥಳೀಯರು ನೋಡಿ ಮಾಲಕರಿಗೆ ವಿಷಯ ತಿಳಿಸಿದ್ದು, ಅವರು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಳ್ತಂಗಡಿ ಠಾಣೆಯ ಪ್ರಮೋದ್, ಕುಶಾಲಪ್ಪ ಯಂ. ಶಿವಾನಂದ , ಗಿರೀಶ್, ಸ್ಥಳಕ್ಕೆ ಆಗಮಿಸಿದ್ದು, ಸುತ್ತ ಮುತ್ತ ಹಾಗೂ ಅಂಗಡಿಯಲ್ಲಿರುವ ಸಿ.ಸಿ. ಕ್ಯಾಮಾರ ಪರಿಶೀಲನೆ ಮಾಡಿದ್ದಾರೆ. ಮಧ್ಯ ರಾತ್ರಿ ಸುಮಾರು 1 ರಿಂದ 2 ಗಂಟೆ ಸುಮಾರಿಗೆ , ಮೂವರು ಸೇರಿ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ. ನಗದು ಸೇರಿದಂತೆ ಏನೆಲ್ಲ ಕಳ್ಳತನ ಆಗಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!