ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮೀಯರು ಕೆಮ್ಮಟ್ಟೆಯಲ್ಲಿ SKDRDP BC ಟ್ರಸ್ಟ್ ವತಿಯಿಂದ ನೀರು ಉಳಿಸಿ ಭವಿಷ್ಯದ ನೀರು ಇಂದಿನ ಕಾಳಜಿ ಅಭಿಯಾನ:

ಮೀಯರು ಕೆಮ್ಮಟ್ಟೆಯಲ್ಲಿ SKDRDP BC ಟ್ರಸ್ಟ್ ವತಿಯಿಂದ ನೀರು ಉಳಿಸಿ ಭವಿಷ್ಯದ ನೀರು ಇಂದಿನ ಕಾಳಜಿ ಅಭಿಯಾನ:

 

 

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಧರ್ಮಸ್ಥಳ ಯುನಿಸೆಫ್ ಹೈದರಾಬಾದ್ ಇದರ ಜಂಟಿ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ  ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ನೀರು ಉಳಿಸಿ ಮಹಾ ಅಭಿಯಾನ ಹಮ್ಮಿಕೊಳ್ಳಲಾಯಿತು.

 

 

ಶುದ್ಧ ನೀರು ಯಾಕೆ ಬೇಕು,ನೀರಿನ ನಿರ್ವಹಣೆಯ ಅವಶ್ಯಕತೆ ಏಕಿದೆ, ಪ್ರಸ್ತುತ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ನೀರಿನ ಪರಿಸ್ಥಿತಿ ಹೇಗಿದೆ,ನೀರಿನ ಸಂರಕ್ಷಣೆಯಲ್ಲಿ ನಮ್ಮ ಹೊಣೆಗಾರಿಕೆ ಏನು,ನಾವು ಸಣ್ಣ ಮಟ್ಟದಲ್ಲಿ ಹೇಗೆ ನೀರನ್ನು ಉಳಿತಾಯ ಮಾಡಬಹುದು ಎನ್ನುವ ವಿಚಾರವಾಗಿ ವಲಯ ಮೇಲ್ವಿಚಾರಕರಾದ ಚಿತ್ತರಂಜನ್   ಮಾಹಿತಿಯನ್ನು ನೀಡಿದರು.

 

 

 

 

ಮನೆಯಲ್ಲಿ ಇಂಗು ಗುಂಡಿಯನ್ನು ನಿರ್ಮಾಣ ಮಾಡಿ ಮನೆಯ ಸುತ್ತಮುತ್ತಲಿನ ನೀರನ್ನು ಭೂಮಿಗೆ ಇಂಗಿಸುವಂತೆ ಮಾಡುವುದು. ಸಮುದಾಯದ ಭಾಗಗಳಲ್ಲಿ ಇಂಗು ಗುಂಡಿ ನಿರ್ಮಿಸಿ, ಆ ನೀರನ್ನು ಭೂಮಿಗೆ ಇಂಗಿಸುವಂತೆ ಮಾಡುವುದು. ಟ್ಯಾಪ್ ಸೋರದಂತೆ ನೋಡಿಕೊಳ್ಳುವುದು, ಮನೆಯಲ್ಲಿ ನೀರು ಪೋಲಾಗದಂತೆ ,ಮಿತವಾಗಿ ನೀರು ಬಳಸುವುದು, ಗಿಡಗಳಿಗೆ ಯಥೇಚ್ಛವಾಗಿ ನೀರು ನೀಡದೆ ಇರುವುದು ಈ ರೀತಿಯಾಗಿ ನಾವು ನೀರನ್ನು ಉಳಿಕೆ ಮಾಡಬಹುದು ಎಂದು ತಿಳಿಸಲಾಯಿತು.

ಈ ಸಂದರ್ಭ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಅಪೂರ್ವ ಜೈನ್  ಮಾತನಾಡಿ ಪರಿಸರದ ಸಂರಕ್ಷಣೆಯೊಂದಿಗೆ ನೀರು ಉಳಿಸುವುದು ಇಂದಿನ ದಿನದಲ್ಲಿ ಅನಿವಾರ್ಯವಾಗಿದೆ  ಎಂದು ತಿಳಿಸಿದರು, ಈ ವೇಳೆ ನಿತಿನ್ ,ನವೀನ್ ಸೇವಾಪ್ರತಿನಿಧಿ ಚೈತ್ರ,VLE ನವ್ಯ ಹಾಗೂ ಒಕ್ಕೂಟದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು..

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!