ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಲಾಯಿಲ ವಾಮಾಚಾರ ಅಲ್ಲ, ದೋಷ ಪರಿಹಾರಕ್ಕೆ ನಡೆದ ಪೂಜೆ , ಭಯ ಬೇಡ  ಸ್ಥಳೀಯರ ಸ್ಪಷ್ಟನೆ:

ಲಾಯಿಲ ವಾಮಾಚಾರ ಅಲ್ಲ, ದೋಷ ಪರಿಹಾರಕ್ಕೆ ನಡೆದ ಪೂಜೆ , ಭಯ ಬೇಡ  ಸ್ಥಳೀಯರ ಸ್ಪಷ್ಟನೆ:

 

 

 

ಬೆಳ್ತಂಗಡಿ: ಲಾಯಿಲ ಗ್ರಾಮದ ಬಜಕ್ರೆಸಾಲು ಎಂಬಲ್ಲಿ ಸೋಮವತಿ ನದಿಯ ನೀರಿನಲ್ಲಿ ಬಾಳೆ ಎಲೆ ಹೂ ಸಹಿತ ಕೆಲವೊಂದು  ಪೂಜೆಗೆ ಬಳಸಿದ ವಸ್ತುಗಳು ಕಂಡು ಬಂದಿದ್ದು, ಇದರ ಪೋಟೊ ವೈರಲ್ ಆಗಿ ಬಜಕ್ರೆಸಾಲು ಬಳಿ ವಾಮಚಾರ ಎಂಬ ಸುದ್ದಿ ಹರಡಲಾಗಿತ್ತು, ಇದರಿಂದ ಸ್ಥಳೀಯರು ಭಯಗೊಂಡಿದ್ದರು.

 

 

ವಾಸ್ತವವಾಗಿ ಇದು ಸುಳ್ಳು ಸುದ್ದಿಯಾಗಿದ್ದು  ವಾಮಾಚಾರ ಮಾಡಿದ್ದಲ್ಲ ಸ್ಥಳೀಯ ಮನೆಯವರು ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ದೋಷ ಪರಿಹಾರಕ್ಕಾಗಿ ಮಾಡಿದ ಪೂಜೆಯ ವಸ್ತುಗಳಾಗಿದ್ದು ಇದನ್ನೇ ತಪ್ಪಾಗಿ ಬಿಂಬಿಸಿ, ಪೋಟೊ ತೆಗೆದು  ವಾಮಾಚಾರದ ಸುದ್ದಿ ಹರಡಲಾಗಿದೆ. ಇಲ್ಲಿ ಯಾವುದೇ ವಾಮಾಚಾರ ನಡೆದಿಲ್ಲ ಸ್ಥಳೀಯರು ಹಾಗೂ ಸಾರ್ವಜನಿಕರು ಭಯಪಡದೇ ತಪ್ಪು ಅರ್ಥೈಸಿಕೊಳ್ಳಬಾರದು, ಎಂದು ಸ್ಥಳೀಯ ವ್ಯಕ್ತಿಯೊಬ್ಬರು ಈ ಬಗ್ಗೆ ಸ್ಪಷ್ಟ ಪಡಿಸಿದರಲ್ಲದೇ ಇಂತಹ ಸೂಕ್ಷ್ಮ ವಿಷಯಗಳನ್ನು ಸರಿಯಾಗಿ ಪರಿಶೀಲಿಸದೇ ವೈರಲ್ ಮಾಡಬಾರದು,ಇದರಿಂದ ಜನರು ಭಯಭೀತರಾಗಿ ಆತಂಕಕ್ಕೊಳಗಾಗುತ್ತಾರೆ. ಒಂದು ವೇಳೆ ಗಮನಕ್ಕೂ ಬಂದರೂ ಪಂಚಾಯತ್, ಅಥವಾ ಸ್ಥಳೀಯ ಜನಪ್ರತಿನಿಧಿಗಳ, ಪೊಲೀಸರ  ಗಮನಕ್ಕೆ ತರುವಂತೆ ವಿನಂತಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!