ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಎಕ್ಸೆಲ್ ಟೆಕ್ನೋ ಸ್ಕೂಲ್ ವಿದ್ಯಾ ಸಾಗರ ಕ್ಯಾಂಪಸ್  ಗುರುವಾಯನಕೆರೆ :ಹೆತ್ತವರ ಒರಿಯಂಟೇಶನ್ "ನಾಂದಿ 2025" ಕಾರ್ಯಕ್ರಮ:

ಎಕ್ಸೆಲ್ ಟೆಕ್ನೋ ಸ್ಕೂಲ್ ವಿದ್ಯಾ ಸಾಗರ ಕ್ಯಾಂಪಸ್  ಗುರುವಾಯನಕೆರೆ :ಹೆತ್ತವರ ಒರಿಯಂಟೇಶನ್ "ನಾಂದಿ 2025" ಕಾರ್ಯಕ್ರಮ:

 

 

 

ಬೆಳ್ತಂಗಡಿ:  ಎಕ್ಸೆಲ್ ಟೆಕ್ನೋ ಸ್ಕೂಲ್ ವಿದ್ಯಾ ಸಾಗರ ಕ್ಯಾಂಪಸ್ , ಗುರುವಾಯನಕೆರೆ ಯಲ್ಲಿ ಹೆತ್ತವರ ಒರಿಯಂಟೇಶನ್,' ನಾಂದಿ - 2025 'ನಡೆಯಿತು. ಆಪ್ತ ಸಲಹೆಗಾರ್ತಿ ಡಾ.ಸ್ವಾತಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು, ಮಗುವಿನ ವಯಸ್ಸಿಗೆ ಅನುಗುಣವಾಗಿ ದೈಹಿಕ,ಮಾನಸಿಕ ಮತ್ತು ಭಾವನಾತ್ಮಕವಾಗಿ ಬೆಳೆಯಲು ಬೇಕಾದ ಪರಿಸರವನ್ನು ನಿರ್ಮಿಸುವ ಜವಾಬ್ದಾರಿ ಪೋಷಕರದ್ದಾಗಿದೆ.ಮಗು ವಯಸ್ಸಿಗೆ ತಕ್ಕಂತೆ ಪ್ರೌಢಿಮೆ ರೂಢಿಸಿಕೊಳ್ಳುವ ಹಾಗೂ ಮುಂದಿನ ದಿನಗಳಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ ಬೆಳೆಯಬೇಕಾದಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಬಹಳ ಮಹತ್ವದ್ದು.ಮಕ್ಕಳ ಬೆಳವಣಿಗೆಯ ಸಂದರ್ಭದಲ್ಲಿ ಪೋಷಕರು ವಿಶೇಷ ಕಾಳಜಿ ವಹಿಸಬೇಕು.ಮಕ್ಕಳ ಜೊತೆ ತಾಳ್ಮೆ ಕಳೆದುಕೊಳ್ಳದೆ ವರ್ತಿಸಬೇಕಾದರೆ ಹೇಗಿರಬೇಕು ಎಂಬುದರ ಬಗ್ಗೆ ಸಲಹೆ ನೀಡಿದ ಅವರು,ಮಕ್ಕಳಿಗೆ ಅವರೊಂದಿಗೆ ಪೋಷಕರು ಕಳೆಯುವ ಸಮಯವೇ ಅತಿ ದೊಡ್ಡ ಉಡುಗೊರೆ 'ಎಂದು ಹೇಳಿದರು.

ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ಕುಮಾರ್ ಎಂ ಮಾತನಾಡಿ, ' ಸಾಧಕನಾಗಬೇಕಿದ್ದರೆ, ಪರಿಶ್ರಮ ಪಡಬೇಕು. ನಿರಂತರವಾದ ಪರಿಶ್ರಮಕ್ಕೆ ನಿಜವಾದ ಗೌರವ ಸಲ್ಲುತ್ತದೆ. ಅಂಥ ಸಾಧಕರಾಗಲು ನಮ್ಮ ಮಕ್ಕಳನ್ನು ಪ್ರೇರೇಪಿಸಬೇಕಾಗಿದೆ ' ಎಂದರು. ಅಧ್ಯಕ್ಷತೆ ವಹಿಸಿದ್ದ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಮಾತನಾಡಿ, ' ಎಳೆಯ ಮಕ್ಕಳ ಕಲರವ ನಮ್ಮ ಕ್ಯಾಂಪಸ್ ಗೆ ಹೊಸತನವನ್ನು ತಂದಿದೆ. ಮಕ್ಕಳು ದೇವರ ಪ್ರತಿರೂಪ. ಹಾಗಾಗಿ ಇಡೀ ನಮ್ಮ ಕ್ಯಾಂಪಸ್ ದೈವಿಕ ಕಳೆಯಿಂದ ಕಂಗೊಳಿಸುತ್ತಿದೆ. ' ಎಂದರು.

ಅಬಾಕಸ್ ತರಬೇತುದಾರ ಗುರುರಾಜ್ ಮಾತನಾಡಿದರು. ಎಕ್ಸೆಲ್ ಟೆಕ್ನೋ ಸ್ಕೂಲ್ ಸಂಯೋಜಕಿ ಲೀನಾ ಫ್ಲೋರಿನ್ ಪಿಂಟೋ ಪ್ರಾಸ್ತಾವಿಕವಾಗಿ ಮಾತನಾಡಿ,ಸ್ವಾಗತಿಸಿದರು. ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿಯರಾದ ಪವಿತ್ರ ಹೆತ್ತವರಿಗೆ ಸಲಹೆ - ಸೂಚನೆಗಳನ್ನು ನೀಡಿದರು. ಗೀತಾ ಸಹಕರಿಸಿದರು. ಸ್ವಾತಿ ನಿರೂಪಿಸಿದರು. ಚೇತನಾ ವಂದಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!