ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಶ್ರೀ ರಾಮ ಶಿಕ್ಷಣ ಸಂಸ್ಥೆ ಸುಲ್ಕೇರಿ: ಬ್ರಹ್ಮಶ್ರೀ ಸೇವಾ ಪ್ರತಿಷ್ಠಾನ ಪುಷ್ಪಗಿರಿ ವತಿಯಿಂದ ₹ 3.50 ಲಕ್ಷ ಮೌಲ್ಯದ ಡ್ರಾಯಿಂಗ್ ಮತ್ತು ನೋಟ್ ಪುಸ್ತಕ ವಿತರಣೆ: ಸರ್ವಾಂಗೀಣ ವಿಕಾಸದ ಶಿಕ್ಷಣ ಇಂದಿನ ಅಗತ್ಯತೆ: ಕಿರಣಚಂದ್ರ:

ಶ್ರೀ ರಾಮ ಶಿಕ್ಷಣ ಸಂಸ್ಥೆ ಸುಲ್ಕೇರಿ: ಬ್ರಹ್ಮಶ್ರೀ ಸೇವಾ ಪ್ರತಿಷ್ಠಾನ ಪುಷ್ಪಗಿರಿ ವತಿಯಿಂದ ₹ 3.50 ಲಕ್ಷ ಮೌಲ್ಯದ ಡ್ರಾಯಿಂಗ್ ಮತ್ತು ನೋಟ್ ಪುಸ್ತಕ ವಿತರಣೆ: ಸರ್ವಾಂಗೀಣ ವಿಕಾಸದ ಶಿಕ್ಷಣ ಇಂದಿನ ಅಗತ್ಯತೆ: ಕಿರಣಚಂದ್ರ:

 

 

ಬೆಳ್ತಂಗಡಿ : ಶಿಕ್ಷಣವೆಂದರೆ ಬರಿಯ ಪಠ್ಯವಲ್ಲ. ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಪೂರಕವಾದ ಎಲ್ಲ ಚಟುವಟಿಕೆ ಗಳನ್ನು ಶಿಕ್ಷಣ ಒಳಗೊಂಡಿರಬೇಕು. ದೈಹಿಕ , ಮಾನಸಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಶಿಕ್ಷಣ ಹಾದಿಯಾಗ ಬೇಕು ಎಂದು ಸಮಾಜ ಸೇವಕ ಕಿರಣಚಂದ್ರ ಡಿ. ಪುಷ್ಪಗಿರಿ ಉರುವಾಲು ಹೇಳಿದರು . ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ, ಶ್ರೀರಾಮ ಪ್ರೌಢಶಾಲೆ, ಸುಲ್ಕೇರಿಯಲ್ಲಿ 1 ನೇ ತರಗತಿಯಿಂದ 10 ನೇ ತರಗತಿಯವರೆಗಿನ 670 ವಿದ್ಯಾರ್ಥಿಗಳಿಗೆ ಬ್ರಹ್ಮಶ್ರೀ ಸೇವಾ ಪ್ರತಿಷ್ಠಾನ ಪುಷ್ಪಗಿರಿ ಪ್ರಾಯೋಜಕತ್ವದಲ್ಲಿ 3 ಲಕ್ಷ 50 ಸಾವಿರ ರೂಪಾಯಿ ಮೌಲ್ಯದ ಡ್ರಾಯಿಂಗ್ ಮತ್ತು ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು . ಕಾರ್ಕಳ ಹೊಸಸಂಜೆ ಬಳಗದ ಅಧ್ಯಕ್ಷ ಆರ್. ದೇವರಾಯ ಪ್ರಭು, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಾಜು ಪೂಜಾರಿ , ಕಣಿಯೂರು ಗ್ರಾಮ ಪಂಚಾಯತ್ ಪ್ರವೀಣ್ ಗೌಡ , ಪ್ರಗತಿಪರ ಕೃಷಿಕರಾದ ಜಗದೀಶ್ ಗೌಡ ದಿಡುಪೆ, ಭರತ್ ಗೌಡ ಕಣಿಯೂರು ಉಪಸ್ಥಿತರಿದ್ದರು. ಶಾಲಾ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಗಣೇಶ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು . ಶಾರ್ವರಿ ಸ್ವಾಗತಿಸಿದರು . ಮುಖ್ಯ ಶಿಕ್ಷಕ ಪ್ರಮೋದ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು . ಶಿಕ್ಷಕ ಸತೀಶ್ ಕುಮಾರ್ ಎನ್. ಕಾರ್ಯಕ್ರಮ ನಿರೂಪಿಸಿದರು .ಶಶಿಕಲಾ ವಂದಿಸಿದರು .

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!