ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › 3 ದಿನಗಳಿಂದ ಹೆದ್ದಾರಿಯಲ್ಲಿ ಅನಾಥವಾಗಿ ನಿಂತಿದೆ ಬೈಕ್...? ಸ್ಥಳೀಯವಾಗಿ ಮೂಡುತ್ತಿದೆ ಹಲವು ಅನುಮಾನ..!

3 ದಿನಗಳಿಂದ ಹೆದ್ದಾರಿಯಲ್ಲಿ ಅನಾಥವಾಗಿ ನಿಂತಿದೆ ಬೈಕ್...? ಸ್ಥಳೀಯವಾಗಿ ಮೂಡುತ್ತಿದೆ ಹಲವು ಅನುಮಾನ..!

 

 

ಬೆಳ್ತಂಗಡಿ: ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ನಿಡಿಗಲ್ ಸೀಟು  ರಾಷ್ಟ್ರೀಯ ಹೆದ್ದಾರಿಯಲ್ಲಿ ರಕ್ಷಿತರಣ್ಯದ ಕುಕ್ಕುದ ಕಟ್ಟೆ ಬಳಿ ಕಳೆದ ಮೂರು ದಿನಗಳಿಂದ ಬೈಕೊಂದು ಅನಾಥ ರೀತಿಯಲ್ಲಿ ಸೈಡ್ ಸ್ಟ್ಯಾಂಡ್ ಹಾಕಿ ನಿಲ್ಲಿಸಿರುವುದು ಕಂಡುಬಂದಿದೆ. ಮೇಲ್ನೋಟಕ್ಕೆ ಯಾರೋ ಬೈಕ್ ನಿಲ್ಲಿಸಿ ಬಹಿರ್ದೆಸೆಗೆ ಹೋಗಿರ ಬಹುದು ಎಂಬಂತೆ ಕಂಡು ಬರುವುದರಿಂದ ಯಾರೂ ಈ ನಿಲ್ಲಿಸಿರುವ ಬೈಕ್ ಬಗ್ಗೆ ಹೆಚ್ಚಿನ ಗಮನ ಹರಿಸಿಲ್ಲ ಅದರೆ ದಿನ ನಿತ್ಯ ಪ್ರಯಾಣಿಸುವ ವಾಹನ ಸವಾರರು ಈ ಬಗ್ಗೆ ಗಮನ ಹರಿಸಿ ಕಳೆದ 4 ದಿನಗಳಿಂದ ಬೈಕ್ ನಿಂತಲ್ಲಿಯೇ ಇದ್ದು, ಅದರ ಹ್ಯಾಂಡಲ್ ನಲ್ಲಿ ಪ್ಲಾಸ್ಟಿಕ್ ಚೀಲ ಹಾಗೂ ಒಂದು ಶರ್ಟ್ ಇದ್ದು. ರಾಮನಗರ ನೋಂದಾವಣೆಯ ನಂಬರ್ ಬೈಕ್ ನಲ್ಲಿ ಇದೆ.  ಎಂಬ ಮಾಹಿತಿ ಸ್ಥಳೀಯರು ನೀಡಿದ್ದಾರೆ, ಯಾರೋ ಬೈಕ್ ರಸ್ತೆಯಲ್ಲೆ ಬಿಟ್ಟು ಎಲ್ಲಾದರೂ ಹೋಗಿದ್ದರೋ , ಏನಾದರೋ ಮಾಡಿಕೊಂಡಿದ್ದರೋ, ಕಳ್ಳತನ ಮಾಡಿದ ಬೈಕೊ ಅಥವಾ ಬೈಕ್ ಹಾಳಾಗಿದ್ದು ಅದನ್ನು ಅಲ್ಲೇ ಬಿಟ್ಟು ಹೋಗಿದ್ದರೋ ಒಂದು ವೇಳೆ   ಹೆದ್ದಾರಿ ಕಾಮಗಾರಿ ನಿರ್ವಹಿಸುವವರ  ಬೈಕ್  ಆಗಿದ್ದರೆ ನಿಂತಲ್ಲಿಯೇ ನಿಲ್ಲಿಸಲು ಸಾಧ್ಯವೇ, ಎನ್ನುವ ಅನುಮಾನ ಸ್ಥಳೀಯವಾಗಿ ಮೂಡುತಿದ್ದು, ಈ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ತನಿಖೆಯಿಂದ ಸ್ಪಷ್ಟ ಉತ್ತರ ದೊರಕಲಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!