ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ರಿಕ್ಷಾ ಚಲಾಯಿಸುತ್ತಿದ್ದಾಗಲೇ ಹೃದಯಾಘಾತ:ಕೊಕ್ಕಡದ ರಿಕ್ಷಾ ಚಾಲಕ ಅಕಾಲಿಕ ಮರಣ::

ರಿಕ್ಷಾ ಚಲಾಯಿಸುತ್ತಿದ್ದಾಗಲೇ ಹೃದಯಾಘಾತ:ಕೊಕ್ಕಡದ ರಿಕ್ಷಾ ಚಾಲಕ ಅಕಾಲಿಕ ಮರಣ::

 

 

 

ಬೆಳ್ತಂಗಡಿ; ಕೊಕ್ಕಡ ಸಮೀಪದ ಕೆಂಪಕೋಡಿನ ನಿವಾಸಿ ಶರತ್ ಕುಮಾರ್ ಕೆ (36) ಅವರು ತಮ್ಮ ಆಟೋ ರಿಕ್ಷಾ ಚಾಲನೆಯಲ್ಲೇ ಇದ್ದ ವೇಳೆ ಹೃದಯಾಘಾತದಿಂದ ಅಕಾಲಿಕವಾಗಿ ಮೃತಪಟ್ಟಿರುವ ದುರ್ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಶರತ್ ಕುಮಾರ್ ಅವರು ಪ್ರತಿನಿತ್ಯದಂತೆ ಇಂದು( ಜೂ.3) ಬೆಳಿಗ್ಗೆ ವಿದ್ಯಾರ್ಥಿಗಳನ್ನು ಶಾಲೆಗೆ ಬಿಟ್ಟು ತಮ್ಮ ಸ್ವಂತ ಆಟೋ ರಿಕ್ಷಾ ಚಲಾಯಿಸಿಕೊಂಡು ಮನೆಗೆ ಮರಳುತ್ತಿದ್ದರು. ಈ ವೇಳೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ರಿಕ್ಷಾ ಚಲಾಯಿಸುವ ನಡುವೆಯೇ ನಿಧನರಾದರು. ಸ್ಥಳೀಯರು ಕೂಡಲೇ ವಿಷಯವನ್ನು ಗಮನಿಸಿ ಶರತ್‌ರನ್ನು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿಸಿದರು. ಆದರೆ, ಅದಾಗಲೇ ಅವರು ನಿಧನ ಹೊಂದಿದ್ದರು. ಮೃತ ಶರತ್ ಕುಮಾರ್ ಅವರು ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದರು. ಅವರು ತಂದೆ ರಘುರಾಮ ಮಡಿವಾಳ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!