ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಅಡಿಕೆ ಮರಕ್ಕೆ  ಮದ್ದು ಸಿಂಪಡಣೆ ವೇಳೆ ಅವಘಡ: ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು:

ಅಡಿಕೆ ಮರಕ್ಕೆ  ಮದ್ದು ಸಿಂಪಡಣೆ ವೇಳೆ ಅವಘಡ: ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು:

 

 

 

ಕೊಕ್ಕಡ: ಅರಸಿನಮಕ್ಕಿ ಅಡಿಕೆ ಮರಕ್ಕೆ ಮದ್ದು ಸಿಂಪಡಣೆ ವೇಳೆ ವಿದ್ಯುತ್ ಶಾಕ್ ಹೊಡೆದು ಕಾರ್ಮಿಕ ಸಾವನ್ನಪ್ಪಿದ ಘಟನೆ ಅರಸಿನ ಮಕ್ಕಿ ಬಳಿಯ ಎಂಜಿರ ಎಂಬಲ್ಲಿ ನಡೆದಿದೆ. ತೋಟವೊಂದರಲ್ಲಿ ಅಡಿಕೆ ಮರಗಳಿಗೆ ಔಷಧಿ ಸಿಂಪಡನೆ ಮಾಡುವ ವೇಳೆ ದೋಟಿ ವಿದ್ಯುತ್ ತಂತಿಗೆ ತಾಗಿ ಮದ್ದು ಸಿಂಪಡನೆ ಮಾಡುತಿದ್ದ ಉಡೈರೆ ಕೃಷ್ಣಪ್ಪ ಕುಲಾಲ್(49ವ) ರವರು ವಿದ್ಯುತ್ತಾಘಾತದಿಂದ ಮೃತ ಪಟ್ಟಿದ್ದಾರೆ.

ವಿದ್ಯುತ್ ಆಘಾತಕ್ಕೊಳಗಾಗಿ ಬಿದ್ದ ಕೂಡಲೇ ಕೃಷ್ಣಪ್ಪ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ಪತ್ನಿ ಲಲಿತ, ಪುತ್ರ ಯತೀಶ್, ಪುತ್ರಿ ಶಿಲ್ಪಾರನ್ನು ಅಗಲಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!