ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬುರುಡೆ ಚಿನ್ನಯ್ಯನ ಎಸ್ಐಟಿ ಕಸ್ಟಡಿ ಅವಧಿ ಅಂತ್ಯ: ಇಂದು ಕೊರ್ಟಿಗೆ ಹಾಜರುಪಡಿಸಲಿರುವ ಅಧಿಕಾರಿಗಳು ಚಿನ್ನಯ್ಯ ಪರ ವಾದ ನಾಲ್ಕು  ವಕೀಲರ ಆಗಮನ:

ಬುರುಡೆ ಚಿನ್ನಯ್ಯನ ಎಸ್ಐಟಿ ಕಸ್ಟಡಿ ಅವಧಿ ಅಂತ್ಯ: ಇಂದು ಕೊರ್ಟಿಗೆ ಹಾಜರುಪಡಿಸಲಿರುವ ಅಧಿಕಾರಿಗಳು ಚಿನ್ನಯ್ಯ ಪರ ವಾದ ನಾಲ್ಕು  ವಕೀಲರ ಆಗಮನ:

 

 

 

ಬೆಳ್ತಂಗಡಿ : ಬುರುಡೆ ಚಿನ್ನಯ್ಯ ಬಂಧನ ಪ್ರಕರಣ ಸಂಬಂಧ ಆರೋಪಿ ಚಿನ್ನಯ್ಯ ಪರ ವಕಾಲತ್ತು ನಡೆಸಲು ಮಂಗಳೂರಿನಿಂದ ನಾಲ್ಕು ಜನ ವಕೀಲರು ಬೆಳ್ತಂಗಡಿ ಕೋರ್ಟ್ ಗೆ ಆಗಮಿಸಿದ್ದಾರೆ.

ಬೆಳ್ತಂಗಡಿ ಬುರುಡೆ ಪ್ರಕರಣದಲ್ಲಿ ದೂರುದಾರ ಚಿನ್ನಯ್ಯನನ್ನು ಆ.23 ರಂದು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದರು. ಈ ವೇಳೆ ಆರೋಪಿ ಚಿನ್ನಯ್ಯ ನ್ಯಾಯಾಧೀಶರಲ್ಲಿ ನನಗೆ ಉಚಿತ ವಕೀಲರು ಬೇಕೆಂದು ಮನವಿ ಮಾಡಿದ್ದ ಹಿನ್ನಲೆಯಲ್ಲಿ ಸೆ.3 ರಂದು ಕಸ್ಟಡಿ ಅಂತ್ಯವಾಗುವ ಹಿನ್ನಲೆಯಲ್ಲಿ ಮಂಗಳೂರು ಉಚಿತ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಿಶೋರ್ ನೇತೃತ್ವದಲ್ಲಿ ನಾಲ್ಕು ಜನ ವಕೀಲ ತಂಡ ಚಿನ್ನಯ್ಯ ಪರ ವಕಾಲತ್ತು ನಡೆಸಲು ಬೆಳ್ತಂಗಡಿ ಕೋರ್ಟ್ ಗೆ ಆಗಮಿಸಿದ್ದು. ಸಂಜೆ 3 ಗಂಟೆಗೆ ಚಿನ್ನಯ್ಯನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಚಿನ್ನಯ್ಯನ ಪರ ವಕೀಲರ ತಂಡ ವಕಾಲತ್ತು ನಡೆಸಲಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!