ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮಾತೃಶ್ರೀ ಕಾಶಿ ಶೆಟ್ಟಿ ನವಶಕ್ತಿ ಪಂಚಭೂತಗಳಲ್ಲಿ ಲೀನ: ಸಹಸ್ರಾರು ಮಂದಿಯಿಂದ ಅಂತಿಮ ದರ್ಶನ :ಸಾವಿರಾರು ಮಂದಿಗೆ ಅನ್ನ ನೀಡಿದ ತಾಯಿ ಇನ್ನಿಲ್ಲ ಶಾಸಕ ಹರೀಶ್ ಪೂಂಜ ಭಾವುಕ:

ಮಾತೃಶ್ರೀ ಕಾಶಿ ಶೆಟ್ಟಿ ನವಶಕ್ತಿ ಪಂಚಭೂತಗಳಲ್ಲಿ ಲೀನ: ಸಹಸ್ರಾರು ಮಂದಿಯಿಂದ ಅಂತಿಮ ದರ್ಶನ :ಸಾವಿರಾರು ಮಂದಿಗೆ ಅನ್ನ ನೀಡಿದ ತಾಯಿ ಇನ್ನಿಲ್ಲ ಶಾಸಕ ಹರೀಶ್ ಪೂಂಜ ಭಾವುಕ:

 

 

ಬೆಳ್ತಂಗಡಿ: ಗುರುವಾಯನಕೆರೆ ನವಶಕ್ತಿ ಮನೆಯ ಮಾತೃಶ್ರೀ ಕಾಶಿ ಶೆಟ್ಟಿಯವರು ಸೋಮವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾಗಿದ್ದು, ಅವರ ಅಂತ್ಯ ಕ್ರಿಯೆಯು ನವಶಕ್ತಿ ಮನೆಯ ಬಳಿ ಸಂಜೆ ನಡೆಯಿತು. ಬೆಳಗ್ಗಿನಿಂದ ಸಂಜೆಯವರೆಗೆ ನವಶಕ್ತಿ ಮನೆಯಲ್ಲಿ ಅಂತಿಮ ಧರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವೇಳೆ ಮೋಹನ್ ಆಳ್ವ  ಶಾಸಕರುಗಳಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ ಪಾಲ್ ಸುವರ್ಣ,ಸುನಿಲ್ ಕುಮಾರ್, ಉಮಾನಾಥ್ ಕೊಟ್ಯಾನ್,ವಿ.ಪ.ಸದಸ್ಯರುಗಳದ  ಕಿಶೋರ್ ಕುಮಾರ್ ಬೊಟ್ಯಾಡಿ, ಪ್ರತಾಪ್ ಸಿಂಹ ನಾಯಕ್ , ಮಾಜಿ ಸಂಸದ ನಳಿನ್ ಕುಮಾರ್ ಕಟೀಲು,   ಉದಯ ಕುಮಾರ್ ಶೆಟ್ಟಿ ಮುನಿಯಾಲು, ಸುಮಂತ್ ಕುಮಾರ್ ಎಕ್ಸೆಲ್ ಕಾಲೇಜು ಸೇರಿದಂತೆ  ಗಣ್ಯರು,ಹಾಗೂ ಸಹಸ್ರಾರು ಮಂದಿ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದು‌ ಕುಟುಂಬಸ್ಥರಿಗೆ ಸಂತೈಸಿ ಸಂತಾಪ ಸೂಚಿಸಿದರು.

 

ಸಹಸ್ರಾರು ಮಂದಿಗೆ ಅನ್ನ ನೀಡಿದ ಮಹಾತಾಯಿ ನಮ್ಮನ್ನೆಲ್ಲ ಅಗಲಿದ್ದಾರೆ. ಕೊಡುಗೈದಾನಿ ಶಶಿಧರ್ ಶೆಟ್ಟಿ, ರಾಜೇಶ್ ಶೆಟ್ಟಿ ಸೇರಿದಂತೆ ತನ್ನ ಆರು ಮಂದಿ ಮಕ್ಕಳನ್ನು ಶಿಸ್ತು, ಸಂಸ್ಕಾರಯುತವಾಗಿ ಬೆಳೆಸಿದ್ದರಿಂದ ಇವತ್ತು ಸಮಾಜದಲ್ಲಿ ಅವರು ಸಮಾಜಮುಖಿ ಚಿಂತನೆಗಳೊಂದಿಗೆ ಶ್ರೇಷ್ಠ ವ್ಯಕ್ತಿಗಳಾಗಿ ಎಲ್ಕರೂ ಗೌರವಿಸುವ ರೀತಿಯಲ್ಲಿ ಬಾಳುತಿದ್ದಾರೆ. ಮನೆಗೆ ಬರುತಿದ್ದ ಎಲ್ಲರನ್ನೂ ಆತ್ಮೀಯವಾಗಿ ಪ್ರೀತಿಯಿಂದ ಬರಮಾಡಿಕೊಳ್ಳುತಿದ್ದ ಅವರ ಸರಳ ಜೀವನ ಇತರರಿಗೆ ಮಾದರಿ,ನನಗೂ ನವಶಕ್ತಿ ಮನೆಗೂ ಅವಿನಾಭಾವ ಸಂಬಂಧ ನನ್ನನ್ನೂ ಮಗನಂತೆ ನೋಡುತಿದ್ದರು.  ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ  ನುಡಿಯುತ್ತ ಭಾವುಕರಾದರು.

 

ಇದನ್ನೂ ಓದಿ:

 

http://prajaprakasha.com/?p=35939

 

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!