ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಧರ್ಮಸ್ಥಳ ಪ್ರಕರಣ,6 ಮಂದಿ ಷಡ್ಯಂತ್ರ ಪ್ರಕರಣದಲ್ಲಿ ಭಾಗಿ : ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಎಸ್ಐಟಿ:

ಧರ್ಮಸ್ಥಳ ಪ್ರಕರಣ,6 ಮಂದಿ ಷಡ್ಯಂತ್ರ ಪ್ರಕರಣದಲ್ಲಿ ಭಾಗಿ : ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಎಸ್ಐಟಿ:

 

 

 

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎಸ್.ಐ.ಟಿ ಅಧಿಕಾರಿಗಳ ತಂಡ ಬೆಳ್ತಂಗಡಿ ನ್ಯಾಯಾಲಯಕ್ಕೆ ಆರು ಮಂದಿ ಆರೋಪಿಗಳ ವಿರುದ್ಧ ನ.20 ರಂದು ‘ಸುಳ್ಳು ಸಾಕ್ಷಿ’ ನೀಡಿರುವ ಬಗ್ಗೆ ತನಿಖೆಯಿಂದ ಕಂಡು ಬಂದ ಮಾಹಿತಿಗಳ  ವರದಿಯನ್ನು ಸಲ್ಲಿಸಿದೆ.

ಬೆಳ್ತಂಗಡಿ ಎಸ್.ಐ.ಟಿ ಅಧಿಕಾರಿಗಳು ಪ್ರಕರಣದಲ್ಲಿ ಜೈಲಿನಲ್ಲಿರುವ ಚಿನ್ನಯ್ಯ ಸೇರಿದಂತೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ಸೌಜನ್ಯ ಮಾವ ವಿಠಲ್ ಗೌಡ, ಸುಜಾತ ಭಟ್ ಸೇರಿ ಒಟ್ಟು ಆರು ಮಂದಿ ಷಡ್ಯಂತ್ರ ಪ್ರಕರಣದಲ್ಲಿ ಭಾಗಿಯಾದವರನ್ನು ಆರೋಪಿಗಳನ್ನಾಗಿ ಮಾಡಿ ‘ಸುಳ್ಳು ಸಾಕ್ಷಿ’ ನೀಡಿರುವ ಬಗ್ಗೆ ವರದಿಯನ್ನು 215 ಅಡಿಯಲ್ಲಿ ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ.ಹೆಚ್.ಟಿ ಮುಂದೆ ನ.20 ರಂದು ಮಧ್ಯಾಹ್ನ 3:15 ಕ್ಕೆ ಗಂಟೆಗೆ ಎಸ್.ಐ.ಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮತ್ತು ತಂಡದವರು ಸಲ್ಲಿಕೆ ಮಾಡಿದ್ದಾರೆ.

ಎಸ್‌ಐಟಿ ವರದಿಯಲ್ಲಿ ಸುಮಾರು 3,923 ಪುಟಗಳನ್ನು ನಮೂದಿಸಿದ್ದಾರೆಐದು ಮಂದಿ ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ ಎಂಬುವುದಾಗಿಯೂ ವರದಿಯಲ್ಲಿ ಅಧಿಕಾರಿಗಳು ನ್ಯಾಯಾಲಯಕ್ಕೆ ನೀಡಿದ ವರದಿಯಲ್ಲಿ ತಿಳಿಸಿರುವುದಾಗಿ ತಿಳಿದು ಬಂದಿದೆ. ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ವರದಿಯ ಬಗ್ಗೆ ನ್ಯಾಯಾಲಯ ಪರಿಶೀಲಿಸಿ ಇದರ ಆಧಾರದಲ್ಲಿ ಮುಂದಿನ ತನಿಖೆ ಬಗ್ಗೆ ನ್ಯಾಯಾಲಯ ಸೂಚನೆ ನೀಡುವಂತೆ ವರದಿಯಲ್ಲಿ ಕೇಳಿಕೊಳ್ಳಲಾಗಿರುವುದಾಗಿ ತಿಳಿದು ಬಂದಿದೆ.ಒಟ್ಟು ಪ್ರಕರಣದ ತನಿಖೆ ಮುಗಿಸಿದ ಬಳಿಕ ಮುಂದಿನ ದಿನಗಳಲ್ಲಿ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!