ಈ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಸಾರ್ವಜನಿಕರು ಪಂಚಾಯತ್ ಗೆ ಮನವಿ ಪ್ರತಿಭಟನೆ ನಡೆಸಿದರೂ ಪಂಚಾಯತ್ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಇನ್ನೂ ಸ್ಮಶಾನ ನಿರ್ಮಾಣವಾಗಿಲ್ಲ, ಈ ಬಗ್ಗೆ ಅಧಿಕಾರಿಗಳಲ್ಲಿ ಪ್ರಶ್ನಿಸಿದರೆ , ಪ್ರಶ್ನಿಸಿದವರನ್ನೇ ಟಾರ್ಗೆಟ್ ಮಾಡುವ ಸ್ಥಿತಿ ಪಂಚಾಯತ್ ನಲ್ಲಿ ನಡೆಯುತ್ತಿದೆ ಎಂದು ಸ್ಥಳೀಯರು ಶಾಸಕರಲ್ಲಿ ಬೇಸರ ವ್ಯಕ್ತಪಡಿಸಿದರಲ್ಲದೇ ಪಿಡಿಒ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಅವರನ್ನು ಬದಲಾವಣೆ ಮಾಡಿ ಎಂದು ಆಗ್ರಹಿಸಿದರು.
ಈ ವೇಳೆ ತಹಶೀಲ್ದಾರ್ ಹಾಗೂ ಇಒ ಅವರಲ್ಲಿ ಮಾಹಿತಿ ಕೇಳಿದಾಗ ಈಗಾಗಲೇ ಜಾಗ ನಿಗದಿಗೊಳಿಸಲಾಗಿದೆ. ಅನುದಾನ ಮೀಸಲಿರಿಸಲಾಗಿದೆ. ಕೆಲವೊಂದು ಚಿಕ್ಕ ಸಮಸ್ಯೆಗಳಿಂದಾಗಿ ಅಡಚಣೆಯಾಗಿದೆ. ಎಂದಾಗ ಒಂದು ವಾರದೊಳಗೆ ಈ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಶಾಸಕ ಹರೀಶ್ ಪೂಂಜ ಖಡಕ್ ಸೂಚನೆ ನೀಡಿದರು.ವೇದಿಕೆಯಲ್ಲಿ ತಹಶಿಲ್ದಾರ್ ಪ್ರಥ್ವಿ ಸಾನಿಕಂ, ಇಒ ಭವಾನಿ ಶಂಕರ್, ಆರ್ ಎಫ್ ಒ ತ್ಯಾಗರಾಜ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.