ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಶುಭ ಕಾರ್ಯಗಳ ನಿರೀಕ್ಷೆಯಲ್ಲಿದ್ದವರಿಗೆ ಅಕಾಲಿಕ ಮಳೆಯಿಂದ ಅಡ್ಡಿ: ಪಡಂಗಡಿ, ಸಿಡಿಲಿನ ಹೊಡತಕ್ಕೆ ಮರ ಛಿದ್ರ,ಕಿತ್ತು ಹೋದ ಮಣ್ಣು: ಜಿಲ್ಲೆಯ ವಿವಿಧೆಡೆ ಭಾರೀ ಅಕಾಲಿಕ ಮಳೆ, , ಕೃಷಿ, ಕಾಮಗಾರಿ ನಡೆಸುವವರಿಗೆ ಸಮಸ್ಯೆ:

ಶುಭ ಕಾರ್ಯಗಳ ನಿರೀಕ್ಷೆಯಲ್ಲಿದ್ದವರಿಗೆ ಅಕಾಲಿಕ ಮಳೆಯಿಂದ ಅಡ್ಡಿ: ಪಡಂಗಡಿ, ಸಿಡಿಲಿನ ಹೊಡತಕ್ಕೆ ಮರ ಛಿದ್ರ,ಕಿತ್ತು ಹೋದ ಮಣ್ಣು: ಜಿಲ್ಲೆಯ ವಿವಿಧೆಡೆ ಭಾರೀ ಅಕಾಲಿಕ ಮಳೆ, , ಕೃಷಿ, ಕಾಮಗಾರಿ ನಡೆಸುವವರಿಗೆ ಸಮಸ್ಯೆ:

 

 

ಬೆಳ್ತಂಗಡಿ: ಚಂಡಮಾರುತದ ಪ್ರಭಾವದಿಂದಾಗಿ ಜಿಲ್ಲೆಯ ವಿವಿಧೆಡೆ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಕೆಲವು ದಿನಗಳಲ್ಲಿ ಹಲವಾರು ಶುಭ ಸಮಾರಂಭಗಳು ನಿಗದಿಯಾಗಿದ್ದು, ಅಕಾಲಿಕ ಮಳೆಯಿಂದ ಆಯೋಜನೆಗೆ ಅಡ್ಡಿಯಾಗಿದೆ. ಬೆಳ್ತಂಗಡಿ ತಾಲೂಕಿನ ಹಲವೆಡೆ, ಮೂಡುಬಿದಿರೆ, ಪುತ್ತೂರು ತಾಲೂಕು ಸೇರಿದಂತೆ ಭರ್ಜರಿ ಮಳೆಯಾಗಿದ್ದು ಕೃಷಿಕರು ತಮ್ಮ ಬೆಳೆ ರಕ್ಷಿಸಿಕೊಳ್ಳಲು ಪರದಾಡಿದ್ದಾರೆ. ಮಿಂಚು, ಗುಡುಗು ಸಹಿತ ಮಳೆಯಾಗಿದ್ದು, ವಿವಿಧೆಡೆ ಹಾನಿ ಉಂಟಾಗಿದೆ. ಪುತ್ತೂರು - ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಮಳೆಯ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು.ಅದಲ್ಲದೇ ಶಾಲೆ ಬಿಡುವ ಸಮಯದಲ್ಲಿ ಮಳೆ ಬಂದಿರುವುದರಿಂದ ವಿದ್ಯಾರ್ಥಿಗಳೂ ಒದ್ದೆಯಾಗುತ್ತ ತೊಂದರೆ ಅನುಭವಿಸಿದರು.

 

 

 

ಇನ್ನು ಕಾಮಗಾರಿ, ಮನೆನಿರ್ಮಾಣ, ದ್ವಿಚಕ್ರ ವಾಹನಗಳಲ್ಲಿ ಸಂಚಾರ ಮಾಡುವವರು ಅಕಾಲಿಕ ಮಳೆಯಿಂದ  ಸಮಸ್ಯೆ ಅನುಭವಿಸಿದರು.

 

https://youtube.com/shorts/PtLaKOgNTHU?si=YhmeJthFC6To82Ym

 

 

ತಾಲೂಕಿನ‌ ಪಡಂಗಡಿ ಗ್ರಾಮದ ಮಲ್ಲಜೆ ಎಂಬಲ್ಲಿ ಸಂಜೆ 5.30 ರ ಸುಮಾರಿಗೆ  ಅಕೇಶಿಯ ಮರಕ್ಕೆ ಸಿಡಿಲು ಬಡಿದ ಪರಿಣಾಮ ಮರ ಪುಡಿ ಪುಡಿಯಾಗಿ ಚಿಂದಿಯಾಗಿದೆಯಲ್ಲದೇ ಅದರ ಸುತ್ತಮುತ್ತಲ ಸುಮಾರು 50 ಅಡಿ ಮಣ್ಣು ಕಿತ್ತು ಹೋಗಿ ಅಗೆದು ಹಾಕಿದಂತಾಗಿದೆ.ಸಂಜೆ ಜೋರಾದ ಸಿಡಿಲಿನ ಶಬ್ದ  ಕೇಳಿದ್ದು, ಸ್ಥಳೀಯರು ಬೆಚ್ಚಿ ಬಿದಿದ್ದಾರೆ. ಘಟನೆ ನಡೆದ ಪರಿಸರದಲ್ಲಿ ಶಾಲೆ ಇದ್ದು , ಮಕ್ಕಳು ಹೋದ ನಂತರ ಈ ಘಟನೆ ನಡೆದಿರುವುದರಿಂದ ಹಾಗೂ   ಜನ ಸಂಚಾರ ಇಲ್ಲದಿದ್ದುದರಿಂದ ದೊಡ್ಡ ಅಪಾಯ ತಪ್ಪಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!