ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪೊಲೀಸ್ ಇನ್ಸ್ ಪೆಕ್ಟರ್ ಸುಬ್ಬಪುರ್ ಮಠ್ ಅವರಿಗೆ ಪತ್ರಕರ್ತರ ಸಂಘದಿಂದ ಗೌರವ:

ಪೊಲೀಸ್ ಇನ್ಸ್ ಪೆಕ್ಟರ್ ಸುಬ್ಬಪುರ್ ಮಠ್ ಅವರಿಗೆ ಪತ್ರಕರ್ತರ ಸಂಘದಿಂದ ಗೌರವ:

 

 

 

ಬೆಳ್ತಂಗಡಿ:  ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಬೆಳ್ತಂಗಡಿ ಠಾಣೆಯಲ್ಲಿ  ಕರ್ತವ್ಯ ನಿರ್ವಹಿಸುತಿದ್ದ ಬಿ.ಜಿ. ಸುಬ್ಬಪುರ ಮಠ ಅವರು ಗದಗ ಜಿಲ್ಲೆಯ ಮುಳಗುಂದ ಠಾಣೆಗೆ ವರ್ಗಾವಣೆಗೊಂಡಿದ್ದು, ಅವರನ್ನು ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗೌರವಿಸಲಾಯಿತು.ಕಳೆದ ಎರಡು ವರ್ಷಗಳಿಂದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಲ್ಲರ ಸಮಸ್ಯೆಗಳಿಗೆ ಸ್ಪಂದಿಸಿ ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಲ್ಲದೇ ತಾಲೂಕಿನ ಹಲವಾರು ಪ್ರಕರಣಗಳನ್ನು ಸಮರ್ಥವಾಗಿ ಬಗೆಹರಿಸಿ   ಜನಮೆಚ್ಚುಗೆ ಗಳಿಸಿ ಇದೀಗ ಗದಗ ಜೆಲ್ಲೆಗೆ ವರ್ಗಾವಣೆಗೊಂಡಿದ್ದೀರಿ , ಮುಂದಿನ ನಿಮ್ಮ ಬದುಕು ಉಜ್ವಲವಾಗಲಿ ಎಂದು ಶುಭ ಹಾರೈಸಿದರು.ಈ ವೇಳೆ ಮಾತನಾಡಿದ ಸುಬ್ಬಪುರ ಮಠ ಅವರು ಬೆಳ್ತಂಗಡಿಗೆ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ  ತಮ್ಮೆಲ್ಲರ ಸಹಕಾರ ಅತ್ಯುತ್ತಮವಾಗಿತ್ತು. ಅದ್ದರಿಂದ ಕೆಲವೊಂದು ತನಿಖೆ ನಡೆಸಲು ನಮಗೆ ಸುಲಭವಾಗಿತ್ತು. ಅದಲ್ಲದೇ ಬೆಳ್ತಂಗಡಿ ತಾಲೂಕಿನ ಪತ್ರಕರ್ತರು ಯಾವುದೇ ಸುಳ್ಳು ವರದಿ ಪ್ರಕಟಿಸದೇ ವಸ್ತು ನಿಷ್ಠ ವರದಿ ಯನ್ನು ಮಾಡುವ ಮೂಲಕ ಜನರ ನಂಬಿಕೆಯನ್ನು ಉಳಿಸುವ ಕೆಲಸ  ಮಾಡುತಿದ್ದಾರೆ.ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತುಕಾರಾಮ್ ಬಿ. ಪ್ರೆಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮನೋಹರ ಬಳೆಂಜ,ಉಪಾಧ್ಯಕ್ಷ ಶಿಬಿ ಧರ್ಮಸ್ಥಳ, ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ, ಆಚುಶ್ರೀ ಬಾಂಗೇರೂ, ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!