ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ನಡ ಗ್ರಾಮ ಪಂಚಾಯತ್ ಅರ್ಹ ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಣೆ: ಸ್ವಂತ ಮನೆ ಕಟ್ಟಿ ನೆಮ್ಮದಿಯ ಜೀವನ ನಡೆಸಿ: ಶಾಸಕ ಹರೀಶ್ ಪೂಂಜ:

ನಡ ಗ್ರಾಮ ಪಂಚಾಯತ್ ಅರ್ಹ ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಣೆ: ಸ್ವಂತ ಮನೆ ಕಟ್ಟಿ ನೆಮ್ಮದಿಯ ಜೀವನ ನಡೆಸಿ: ಶಾಸಕ ಹರೀಶ್ ಪೂಂಜ:

 

 

ಬೆಳ್ತಂಗಡಿ:ಗ್ರಾಮೀಣ ನಿವೇಶನ ಯೋಜನೆಯಡಿ ನಡ ಹಾಗೂ ಕನ್ಯಾಡಿ ಗ್ರಾಮದ ವ್ಯಾಪ್ತಿಯ ಸ.ನಂ.126/ಬಿ ರಲ್ಲಿ ರಚಿಸಲಾದ ನಿವೇಶನಗಳಿಗೆ ನಡ ಗ್ರಾಮ ಪಂಚಾಯತ್ ವತಿಯಿಂದ ಅರ್ಹ 34 ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ಶಾಸಕ ಹರೀಶ್ ಪೂಂಜ ಮಾ 07 ರಂದು ವಿತರಿಸಿದರು. ಬೆಳ್ತಂಗಡಿ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ‌ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿ ಮಾತನಾಡಿದ ಶಾಸಕರು ಕಳೆದ ಹಲವಾರೂ ವರ್ಷಗಳಿಂದ ಸ್ವಂತ ಮನೆ ಕಟ್ಟಬೇಕು ಎಂಬ ನಿಮ್ಮೆಲ್ಲರ ಕನಸು ಗ್ರಾಮ ಪಂಚಾಯತ್ ಸದಸ್ಯರ ಹಾಗೂ ಅಧಿಕಾರಿಗಳ ಮೂಲಕ ನನಸಾಗಿದೆ. ಅದಷ್ಟೂ ಬೇಗ ಮನೆ ಕಟ್ಟಿ ಅದರಲ್ಲಿ ಸುಖಮಯ ಜೀವನ ನಡೆಸಿ ಎಂದು ಶುಭ ಹಾರೈಸಿದರು ಈ ವೇಳೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಶ್ರಮಿಸಿದ ನಡ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಹಾಗೂ ಸಂಬಂಧಿತ ಅಧಿಕಾರಿಗಳ ಕಾರ್ಯವನ್ನು ಶಾಸಕರು ಈ ಸಂದರ್ಭದಲ್ಲಿ ಶ್ಲಾಘಿಸಿದರು.ಸಭೆಯಲ್ಲಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ, ತಾಲೂಕು.ಪಂಚಾಯತ್ ಸಹಾಯಕ ನಿರ್ದೇಶಕ ಪ್ರಶಾಂತ್ ಬಳೆಂಜ, ಜಯಾನಂದ ಲಾಯಿಲ, ನಡ ಗ್ರಾ.ಪಂ ಕಾರ್ಯದರ್ಶಿ ಕಿರಣ್, ಬಿಲ್ ಕಲೆಕ್ಟರ್ ಭಾರತಿ ಉಪಸ್ಥಿತರಿದ್ದರು.  ಪಿಡಿಒ ತಾರನಾಥ್ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!