ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಹೆದ್ದಾರಿ ಬದಿಯಲ್ಲಿ ರಾಶಿ ರಾಶಿ ಕಸ ಸುರಿದ ಪ್ರಕರಣ: ತಪ್ಪಿತಸ್ಥರನ್ನು ಪತ್ತೆ ಹಚ್ಚಿ ದಂಡ ವಸೂಲಿ ಮಾಡಿದ ಲಾಯಿಲ ಗ್ರಾ.ಪಂಚಾಯತ್

ಹೆದ್ದಾರಿ ಬದಿಯಲ್ಲಿ ರಾಶಿ ರಾಶಿ ಕಸ ಸುರಿದ ಪ್ರಕರಣ: ತಪ್ಪಿತಸ್ಥರನ್ನು ಪತ್ತೆ ಹಚ್ಚಿ ದಂಡ ವಸೂಲಿ ಮಾಡಿದ ಲಾಯಿಲ ಗ್ರಾ.ಪಂಚಾಯತ್

 

 

ಬೆಳ್ತಂಗಡಿ:  ಹೆದ್ದಾರಿ ಬದಿ ರಾಶಿ ರಾಶಿ ಕಸವನ್ನು ತಂದು ಬಿಸಾಕಿ ಹೋದವರ ವಿಳಾಸ ಪತ್ತೆ ಹಚ್ಚಿ ಅವರಿಗೆ ದಂಡನೆ ವಿಧಿಸಿದ ಘಟನೆ ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ನಡೆದಿದೆ.   ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಟಿ.ಬಿ. ಕ್ರಾಸ್ ಬಳಿ ರಸ್ತೆ ಬದಿಯಲ್ಲಿ ಕಸ ಸೇರಿದಂತೆ ಇನ್ನಿತರ ಮನೆ ತ್ಯಾಜ್ಯಗಳನ್ನು ತಂದು ಬಿಸಾಕಿದ್ದು ಈ ಬಗ್ಗೆ ಸಾರ್ವಜನಿಕರು ಪಂಚಾಯತ್ ಗೆ ಮಾಹಿತಿ ನೀಡಿದಾಗ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ತಾರನಾಥ್ ನಾಯ್ಕ, ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿ ಹಾಗೂ ಸ್ವಚ್ಛತಾ ಸಿಬ್ಬಂದಿಗಳು  ತೆರಳಿ ಪರಿಶೀಲಿಸಿ ಕಸ ಬಿಸಾಕಿದವರ ವಿಳಾಸ ಪತ್ತೆ ಹಚ್ಚಿ ಸ್ಥಳಕ್ಕೆ ಅವರನ್ನು ಬರ ಹೇಳಿದರಲ್ಲದೆ ರೂ 2, 000 ದಂಡ ವಿಧಿಸಿ ರಸ್ತೆ ಬದಿ ಕಸ ಬಿಸಾಕದಂತೆ ಎಚ್ಚರಿಕೆ ನೀಡಿದ್ದಾರೆ. ತಕ್ಷಣ ಸ್ಪಂದಿಸಿ ಕಸ ಬಿಸಾಕಿದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡ ಲಾಯಿಲ ಪಂಚಾಯತ್ ನ ಅಧಿಕಾರಿಗಳ ನಡೆ ಎಲ್ಲರ ಮೆಚ್ಚುಗೆ ಪಾತ್ರವಾಗಿದೆಯಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಕುವವರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!