ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಹೊಟೇಲ್ ಕಾರ್ಮಿಕನ ಶವ   ಶೌಚಾಲಯದಲ್ಲಿ  ಪತ್ತೆ:

ಹೊಟೇಲ್ ಕಾರ್ಮಿಕನ ಶವ   ಶೌಚಾಲಯದಲ್ಲಿ  ಪತ್ತೆ:

 

 

ಬೆಳ್ತಂಗಡಿ : ಹೊಟೇಲ್ ಕಾರ್ಮಿಕನ ಶವ  ಶೌಚಾಲಯದಲ್ಲಿ  ಪತ್ತೆಯಾದ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ರೆಖ್ಯಾ ಗ್ರಾಮದಲ್ಲಿ  ನಡೆದಿದೆ.

ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಮಲ್ನಾಡ್ ಹೊಟೇಲ್ ನ ಕೆಲಸಗಾರ ಉತ್ತರ ಪ್ರದೇಶ ಮೂಲದ ಹರಿಶಂಕರ್(52) ಎಂಬಾತ ಏ.18 ರಂದು ಸಂಜೆ ಶೌಚಾಲಯಕ್ಕೆ ಹೋಗಿ ವಾಪಸ್ ಬಾರದೆ ಬಿದ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಕೆಲಸಗಾರ ಶೌಚಾಲಯಕ್ಕೆ ಹೋಗಿ ಎಷ್ಟೇ ಸಮಯವಾದರೂ ವಾಪಸ್ ಬಾರದೆ ಇದ್ದಾಗ ಕೆಲಸಗಾರರು ಕಿಟಕಿಯಿಂದ ಇಣುಕಿ ನೋಡಿದಾಗ ಮೃತಪಟ್ಟು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಹೊಟೇಲ್ ಮಾಲೀಕರು ಮಾಹಿತಿ ನೀಡಿದ ವೇಳೆ ಪೊಲೀಸರು  ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮಲ್ನಾಡ್ ಹೊಟೇಲ್ ಮಾಲೀಕರಾದ ಮಂಗಳೂರಿನ ಸತೀಶ್ ಎಂಬವರು ಕೆಲಸಗಾರನನ್ನು ಕೆಲಸಕ್ಕೆ ಸೇರಿಸುವ ವೇಳೆ ಸರಿಯಾದ ಯಾವುದೇ ದಾಖಲೆಗಳನ್ನು ಪಡೆಯದೆ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಆರೋಪಗಳು ಕೇಳಿ ಬಂದಿದೆ. ಮೃತಪಟ್ಟ ಕೆಲಸಗಾರನ ಹೆಸರು ಮತ್ತು ರಾಜ್ಯ ಮಾತ್ರ ತಿಳಿದಿದ್ದು ಯಾವ ವಿಳಾಸದವನು ಎಂದು ಈವರೆಗೆ ತಿಳಿದು ಬಂದಿಲ್ಲ. ಧರ್ಮಸ್ಥಳ ಪೊಲೀಸರು ಮನೆಮಂದಿಯ ಪತ್ತೆಗೆ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!